fbpx

ಕೊಪ್ಪಳದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ

 ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ನವೆಂಬರ ೧೪ ರಿಂದ ೨೦ ರವರೆಗೆ ಏಳು ದಿನಗಳ ಕಾಲ ನಡೆಯುವ ಪುಸ್ತಕ ಪ್ರದರ್ಶನಕ್ಕೆ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ  ಚಾಲನೆ ನೀಡಲಾಯಿತು. 
ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಗೌಡ ಭಾರತೀಯ ಗ್ರಂಥಾಲಯ ಪಿತಾಮಹ  ಡಾ. ಎಸ್. ಆರ್. ರಂಗನಾಥನ್ ಹಾಗೂ ಸರಸ್ವತಿದೇವಿ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿ, ಏಳು ದಿನಗಳ ಕಾಲ ನಡೆಯುವ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ನರಸಿಂಹಮೂರ್ತಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗ್ರಂಥಾಲಯ ಸಹಾಯಕರಾದ ಶಿವನಗೌಡ ಪಾಟೀಲ್ ಹಾಗೂ ನಾಗರಾಜನಾಯಕ ಡೊಳ್ಳಿನ  ಅವರು ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗಂಗಮ್ಮ ಡೊಳ್ಳಿನ, ಅನ್ನಪೂರ್ಣಮ್ಮ, ಓದುಗರಾದ ವೈ.ಬಿ.ಜೂಡಿ ತಿಮ್ಮೇಶ, ಹನಮೇಶ, ಪೀರಬಾಷಾ, ಶಂಕರ, ಜಗದೀಶ, ಉಪಸ್ಥಿತರಿದ್ದರು.  ಗ್ರಂಥಾಲಯದಲ್ಲಿ ಏರ್ಪಡಿಸಲಾದ ಪುಸ್ತಕ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!