You are here
Home > Koppal News > ಭಾವೈಕ್ಯತೆಯ ಜೀವನ ನಮ್ಮದಾಗಬೇಕು : ಚಿಷ್ತಿ

ಭಾವೈಕ್ಯತೆಯ ಜೀವನ ನಮ್ಮದಾಗಬೇಕು : ಚಿಷ್ತಿ

ಅಜ್ಮೀರ್ ದರ್ಗಾದ ಪೀಠಾಧಿಪತಿ ಫಜಲುಲ್ಲಾ ಹಸನ್ ಚಿಷ್ತಿ  ಕೊಪ್ಪಳಕ್ಕೆ ಭೇಟಿ
ಕೊಪ್ಪಳ,

: ಎಲ್ಲರೊಂದಿಗೆ ಕೋಮು ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆಯೊಂದಿಗೆ ಜೀವನ ಸಾಗಿಸಬೇಕು. ಜನರಲ್ಲಿ ಭಯ ಉದ್ಬವಿಸುವುದು ಭಯೋತ್ಪಾದನೆಯಂತಹ ಕ್ರೂರ ಚಟುವಟಿಕೆ ನಡೆಸುವವರನ್ನು ನಮ್ಮ ಇಸ್ಲಾಂಧರ್ಮ ಸಹಿಸುವುದಿಲ್ಲ. ಅಂತಹವರನ್ನು  ಯಾವೊಬ್ಬ ವ್ಯಕ್ತಿಯು ಕ್ಷಮಿಸುವುದಿಲ್ಲ ಶಾಂತಿ ನೆಮ್ಮದಿಯ ಮತ್ತು ಸಹಬಾಳ್ವೆಯನ್ನು ಧರ್ಮ ಕಲಿಸುತ್ತದೆ. ನಮ್ಮ ಜೀವನ ಭಾವೈಕ್ಯತೆಯಿಂದ ನಡೆಸಬೇಕು ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ರಾಜಸ್ಥಾನ ರಾಜ್ಯದ ಅಜ್ಮೀರ್ ಐತಿಹಾಸಿಕ ದರ್ಗಾ ಖಾಜಾ ಗರೀಬ್ ನವಾಜ್ ಸುಲ್ತಾನ್-ಉಲ್-ಹಿಂದ್ ದರ್ಗಾದ ಪೀಠಾಧಿಪತಿ ಸೈಯ್ಯದ್ ಮಹಮ್ಮದ್ ಫಜಲುಲ್ಲಾ ಹಸನ್ ಚಿಷ್ತಿ ಗದ್ದೆ ನಶೀನ್ ಖ್ವಾಜಾಸಾಹೇಬ್ ದರ್ಗಾ ಅಜ್ಮೀರ್ ಶರೀಫ್ ರವರು ಅಭಿಪ್ರಾಯ ಪಟ್ಟರು.

 ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಹೊಸಪೇಟೆ ಮತ್ತು ಗಂಗಾವತಿಗೆ ಆಗಮಿಸಿದ ಸಂದರ್ಭದಲ್ಲಿ ಸೋಮವಾರದಂದು ಕೊಪ್ಪಳಜಿಲ್ಲೆಗೆ ಭೇಟಿಮಾಡಿದ ಸಂದರ್ಭದಲ್ಲಿ ಪತ್ರಕೆಯೊಂದಿಗೆ ಮಾತನಾಡುತ್ತಿದ್ದ ಅವರು  ಜೀವಂತವಾಗಿ ಅಮಾಯಕ ಜನರನ್ನು ಕೊಲ್ಲುವಂತಹ ಕ್ರೂರ, ಘೋರ, ಭಯೋತ್ಪಾದನೆ ಎಂದೆಂದಿಗೂ ಇಸ್ಲಾಂ ಧರ್ಮ ಅವಕಾಶ ನೀಡುವುದಿಲ್ಲ. ಭಯೋತ್ಪಾದನೆ ಮಾಡುವಂತಹವರು ನಮ್ಮ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದವರಲ್ಲ ಅವರಿಗೆ ಮತ್ತು ನಮ್ಮ ಧರ್ಮಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ. ಇಂತಹ ಕ್ರೂರ ಚಟುವಟಿಕೆಗೆ ನಾವು ಖಂಡಿಸುತ್ತೇವೆ ಎಂದು ವಿವರಿಸಿದರು. 
ಮುಂದುವರೆದು ಮಾತನಾಡಿದ ಅವರು, ಜನರಲ್ಲಿ ಭಯದ ವಾತಾವರಣ ನಿರ್ಮಿಸುವವರು ಅಮಾಯಕ ಜನರಿಗೆ ಅನಾವಶ್ಯಕ ಕಿರುಕುಳ ತೊಂದರೆ ಕೊಡುವವರು ನಮ್ಮ ಪ್ರವಾದಿ ಮಹ್ಮದ್ (ಸ) ಫೈಗಂಬರ ಅವರ ಅನುಯಾಯಿಗಳು ಆಗಲು ಸಾಧ್ಯವಿಲ್ಲ. ನಮ್ಮ ಪ್ರವಾದಿ (ಸ) ರವರು ಇಂತವರಿಂದ ದೂರವಿರಲು ಸಂದೇಶ ನೀಡಿರುತ್ತಾರೆ. ಅವರು ಶಾಂತಿ, ಸಹಬಾಳ್ವೆ, ಭಾವೈಕ್ಯತೆಯ ಜೀವನಕ್ಕೆ ಸಂದೇಶ ನೀಡಿದ್ದಾರೆ.  ಅದರಂತೆ ಅಜ್ಮೀರ್ ದರ್ಗಾದ ಸೂಫಿ ಸಂತರಾದ ಖಾಜಾ ಗರೀಬ್ ನವಾಜ್ ರವರು ಕೂಡಾ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬಾಳಬೇಕು ಭೇಧ, ಭಾವ ಮಾಡಬಾರದು ಎಂದು ಹೇಳಿದ್ದಾರೆ ಅವರ ಜೀವನ ಚರಿತ್ರ ನಮ್ಮೆಲ್ಲರಿಗೆ ದಾರಿದೀಪವಾಗಲಿ ನಾವು ನಮ್ಮ ಈ ಹಬ್ಬಗಳನ್ನು ಸಂಭ್ರಮದೊಂದಿಗೆ ಇತರ ಎಲ್ಲಾ ಬಾಂಧವರೊಂದಿಗೆ ಸೌಹಾರ್ದತೆಯುತವಾಗಿ ಆಚರಿಸಿಕೊಳ್ಳಬೇಕು. ಅಂದಾಗ ಮಾತ್ರ  ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು  ರಾಜಸ್ಥಾನ ರಾಜ್ಯದ ಅಜ್ಮೀರ್ ಐತಿಹಾಸಿಕ ದರ್ಗಾ ಖಾಜಾ ಗರೀಬ್ ನವಾಜ್ ಸುಲ್ತಾನ್-ಉಲ್-ಹಿಂದ್ ದರ್ಗಾದ ಪೀಠಾಧಿಪತಿ ಸೈಯ್ಯದ್ ಮಹಮ್ಮದ್ ಫಜಲುಲ್ಲಾ ಹಸನ್ ಚಿಷ್ತಿ ಗದ್ದೆ ನಶೀನ್ ಖ್ವಾಜಾಸಾಹೇಬ್ ದರ್ಗಾ ಅಜ್ಮೀರ್ ಶರೀಫ್ ರವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಅವರೊಂದಿಗೆ  ಸುವರ್ಣಗಿರಿ ಪತ್ರಿಕೆಯ ಸಂಪಾದಕ ಶೇಕ್ ಮಹೆಬೂಬ್ ಪಟೇಲ್, ಪತ್ರಕರ್ತರಾದ ಎಂ.ಸಾದಿಕ್‌ಅಲಿ, ಹರೀಶ್ ಎಚ್.ಎಸ್. ವಿ.ಆರ್.ತಾಳಿಕೋಟಿ, ಬದರಿನಾಥ್ ಪುರೋಹಿತ್, ಕಬಂಬ ಟಿ.ವಿ ವರದಿಗಾರ ಮುತ್ತುಸ್ವಾಮಿ,ಶಾಕೀರ್ ಹುಸೇನ್ , ಹುಸೇನ್ ಮೇಸ್ತ್ರಿ, ಸೈಯದ್ ಅಜರುದೀನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Top