fbpx

ವೈದ್ಯರ ಚೀಟಿಯಲ್ಲದೆ ಔಷಧಿ ಮಾರಾಟ ’ಅಪೋಲೋ ಪಾರ್ಮಸಿ’ ಪರವಾನಿಗೆ ರದ್ದು

ಹೊಸಪೇಟೆ-ನಗರದ ಹಲವಾರು ಔಷಧಿ ಅಂಗಡಿ ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ಅವ್ಯಾಹತವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
ಬೆಳೆಯುತ್ತಿರುವ ನಗರದಲ್ಲಿ ಸುಮಾರು ೧೩೦ ಔಷಧ ಅಂಗಡಿಗಳು ಕಾರ್ಯ  ನಿರ್ವಹಿಸುತ್ತಿದ್ದು ಕಾನೂನು ರೀತಿ ವೈದ್ಯರ ಶಿಫಾರಸು ಹಾಗೂ ಬರೆದು ಕೊಡುವ ಚೀಟಿಯ ಮೇರೆಗೆ ಔಷದಿ ಗಳನ್ನು ಮಾರಾಟ ಮಾಡುವ ನಿಯಮವಿದ್ದು ಆದರೆ ಈ ಕಾನೂನು ಗಾಳಿಗೆ ತೂರಿ ಮತ್ತು ಬರಿಸುವ, ಮನೋ ರೋಗ ಹಾಗೂ ’ಸೀಡೆಸಿವ್ ಡ್ರಗ್ಸ್’ ನಿದ್ದೆ ಮಾತ್ರೆಗಳು ಲೈಂಗಿಕ ಸಂಬಂಧಿ ಔಷಧ ಗಳನ್ನು ಮಾರಾಟ ಮಾಡು ತ್ತಿದ್ದು ಸಾರ್ವಜನಿಕರು ಹಾಗೂ ರೋಗಿಗಳ ಮೇಲೆ ದುಷ್ಪರಿಣಾ ಮಗಳು ಉಂಟಾಗುತ್ತಿರುವ ಘಟನೆಗಳು ಜರುಗುತ್ತಿವೆ.
ಈಚೆಗೆ ಬಳ್ಳಾರಿಯ ಔಷಧ ನಿಯಂತ್ರಕರು ಹಾಗೂ ಸಿಬ್ಬಂಧಿ ಕಾಲೇಜು ರಸ್ತೆಯ ಜಬ್ಬಲ್ ವೃತ್ತದಲ್ಲಿರುವ ’ಅಪೋಲೊ ಫಾರ್ಮಸಿ’ ಮೇಲೆ ಸೂಕ್ತವಾದ ಮಾಹಿತಿ ಯನ್ನು ಆಧರಿಸಿ ಧಾಳಿಸಿ ನಡೆಸಿದ್ದು ಪ್ರಕರಣ ವನ್ನು ಪತ್ತೆ ಹಚ್ಚಿ ತಾತ್ಕಾಲಿಕವಾಗಿ ಅಂಗಡಿಯ ಪರವಾನಗಿ ಯನ್ನು ರದ್ದು ಗೊಳಿಸಿದರು. ಈಚೆಗೆ ಬೆಂಗಳೂರಿನಲ್ಲಿ ವಾಸವಿದ್ದ ಯುವಕನೋರ್ವ ನಗರಕ್ಕೆ ಆಗಮಿಸಿದ್ದು ಮತ್ತು ಬರಿಸುವ ಮಾತ್ರೆಗಳನ್ನು ವ್ಯಾಪಕವಾಗಿ ಬಳಸಿ ಅಸ್ವಸ್ಥ ನಾದ ಹಿನ್ನಲೆಯಲ್ಲಿ ಆತನ ಪೋಷಕರು ತಪಾಸಣೆ ನಡೆಸಿದಾಗ  ಆತ ’ಅಪೋಲೊ ಪಾರ್ಮಸಿ’ಯಲ್ಲಿ ಔಷದಿ ಯನ್ನು ಖರೀದಿಸದ್ದ ಬಗ್ಗೆ ಸುಳಿವು ನೀಡಿದ್ದ ಈ ಪ್ರಕರಣವು ಬೆಳಕಿಗೆ ಬಂದಿದೆ.
ಈ ರೀತಿ ’ಸಿಡೆಸಿವ್ ಡ್ರಗ್ಸ್’ ಮನೋರೋಗ ಔಷಧಿ ಮತ್ತು ನಿದ್ರೆ ಮಾತ್ರೆಗಳನ್ನು ವ್ಯಾಪಾರ ಹೆಚ್ಚಳಕ್ಕಾಗಿ ನಿಯಮ ಉಲ್ಲಂಘಿಸಿ ಮಾರಾಟ ಮಾಡುವ ಔಷಧಿ ಅಂಗಡಿಗಳ ಮೇಲೆ ’ಔಷಧಿ ನಿಯಂತ್ರಕರು’ ದಾಳಿ ನಡೆಸಿ ಪರವಾನಿಗಿಯನ್ನು ರದ್ದು ಗೊಳಿಸುವಂತೆ ಸಾರ್ವಜನಿ ಕರು ಒತ್ತಾಯಿಸಿದ್ದಾರೆ.
Please follow and like us:
error

Leave a Reply

error: Content is protected !!