ಪ್ರಭುತ್ವ ಮತ್ತು ಪ್ರತಿಭಟನೆ

2009ರಲ್ಲಿ ಛತ್ತೀಸಗಡದ ಬಸ್ತಾರ ಪ್ರದೇಶದಲ್ಲಿ ಅಂದಿನ ಕೇಂದ್ರ
ಸರಕಾರ ಗ್ರೀನ್ ಹಂಟ್ ಕಾರ್ಯಾಚರಣೆಗೆ ಮುಂದಾಯಿತು. ಇದನ್ನು ವಿರೋಸಿದ ಪ್ರೊ.ಸಾಯಿಬಾಬಾ ಸರಕಾರದ
ದೃಷ್ಟಿಯಲ್ಲಿ ಘೋರ ಅಪರಾಧ ಎಸಗಿದ್ದರು. ದೇಶದ್ರೋಹಕ್ಕೆ ಸಮಾನವಾದ ಅಪರಾಧವನ್ನು ಈ ವಿಕಲಾಂಗ
ಪ್ರೊೆಸರ್ ಎಸಗಿದ್ದರಿಂದ ಅವರ ಬಂಧನ ಅನಿವಾರ್ಯವಾಗಿತ್ತಂತೆ. ಕಾನೂನಿನ ದೃಷ್ಟಿಯಲ್ಲಿ ಅಪರಾಧ
ಎಂದು ಪರಿಗಣಿಸಲ್ಪಟ್ಟರೂ ದೋಷಮುಕ್ತರಾಗಿ ವಿಜಯದ ಮುಗುಳ್ನಗೆ ಬೀರುತ್ತಿರುವ ಜಯಲಲಿತಾ ಬಗ್ಗೆ
ಅಚ್ಚರಿ ವ್ಯಕ್ತಪಡಿಸ ಬೇಕಾಗಿಲ್ಲ. ಗುಜರಾತ್ ಹತ್ಯಾಕಾಂಡ ಪ್ರಕರಣದ ಕೇಂದ್ರ ವ್ಯಕ್ತಿಯನ್ನು ನಾವು
ಪ್ರಧಾನಿಯನ್ನಾಗಿ ಸ್ವೀಕರಿಸಿದ್ದೇವೆ. ದೇಶದ ಆಳುವ ಪಕ್ಷಕ್ಕೆ ಎನ್‌ಕೌಂಟರ್ ಖ್ಯಾತಿ ಅಮಿತ್ ಶಾ
ಅಧ್ಯಕ್ಷರಾಗಿದ್ದಾರೆ. ಬಾಬರಿ ಮಸೀದಿಯ ನೆಲಸಮ ಪ್ರಕರಣದ ಎಲ್.ಕೆ.ಅಡ್ವಾಣಿ ಹಿಂದೆ ದೇಶದ
ಉಪಪ್ರಧಾನಿಯಾಗಿದ್ದರು. ಇಂಥ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.

ಇಂಥ ಪವಾಡ ಪುರುಷರೆಲ್ಲ ರಾಷ್ಟ್ರ ಕಟ್ಟುವ ಹೊಣೆ ಹೊತ್ತಿರುವಾಗ ದೇಶಕ್ಕೆ
ಅಪಾಯಕಾರಿ ಎನ್ನಲಾದ ವ್ಯಕ್ತಿಯೊಬ್ಬರನ್ನು ಮಹಾರಾಷ್ಟ್ರ ಪೊಲೀಸರು ಬಂಸಿ ಜೈಲಿಗೆ ತಳ್ಳಿದ್ದಾರೆ.
ಈತ ಎಷ್ಟು ಅಪಾಯಕಾರಿ ಅಂದರೆ ಈತನಿಗೆ ಜಾಮೀನು ನೀಡಿದರೆ ದೇಶಕ್ಕೆ ಗಂಡಾಂತರ ಎಂದು ನ್ಯಾಯಾೀಶರೂ
ಜಾಮೀನು ನಿರಾಕರಿಸಿದ್ದಾರೆ. ಹೀಗೆ ಜಾಮೀನು ನಿರಾಕರಿಸಲ್ಪಟ್ಟಿದ್ದ ಜನಾರ್ದನರೆಡ್ಡಿ ನ್ಯಾಯಾಲಯದ
ಷರತ್ತುಗಳಿಗೆ ಒಪ್ಪಿ ಜಾಮೀನು ಮೇಲೆ ಬಂದಿದ್ದರೂ ಈ ‘ಅಪಾಯಕಾರಿ’
ವ್ಯಕ್ತಿಗೆ ಜಾಮೀನು ಸಿಕ್ಕಿಲ್ಲ. ಈ ಅಪಾಯಕಾರಿ ವ್ಯಕ್ತಿ ಬೇರಾರೂ ಅಲ್ಲ.
ದಿಲ್ಲಿಯ ರಾಮಲಾಲ ಆನಂದ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ. ಬಾಲ್ಯದಲ್ಲೆ
ಪೋಲಿಯೊ ಪೀಡಿತರಾದ ಈ ಸಾಯಿಬಾಬಾಗೆ ನೆಟ್ಟಗೆ ನಿಲ್ಲಲು ಆಗುವುದಿಲ್ಲ. ಸದಾ ಕಾಲವೂ ಗಾಲಿ ಕುರ್ಚಿಯ
ಮೇಲೆ ನಿತ್ಯವೂ ಕಾಲೇಜಿಗೆ ಹೋಗುವ ಈ ಅಂಗವಿಕಲ ವ್ಯಕ್ತಿ ರಾಷ್ಟ್ರಕ್ಕೆ ‘ಅಪಾಯಕಾರಿ’ಯಾಗಿರುವ ಬಗ್ಗೆ ಖ್ಯಾತ ಇಂಗ್ಲಿಷ್ ಲೇಖಕಿ
ಅರುಂಧತಿ ರಾಯ್‌ಗೆ ಅಚ್ಚರಿಯಾಗಿದೆ. ಈ ಸಾಯಿಬಾಬಾರನ್ನು ಒಂದು ವರ್ಷದ ಹಿಂದೆ ಕೆಲ ಅಪರಿಚಿತ
ವ್ಯಕ್ತಿಗಳು ದಿಲ್ಲಿಯ ಅವರ ಕಾಲೇಜಿನಿಂದ ಹೇಳದೆ ಕೇಳದೆ ಎತ್ತಿ ಹಾಕಿಕೊಂಡು ಹೋದರು. ಆಗ
ಗಾಬರಿಯಾದ ಸಾಯಿಬಾಬಾರ ಪತ್ನಿ ತನ್ನ ಪತಿ ಮನೆಗೆ ಬಂದಿಲ್ಲ, ಅವರ
ಮೊಬೈಲ್ ೆನ್ ಪ್ರತಿಕ್ರಿಯಿಸುತ್ತಿಲ್ಲ ಎಂದು ದಿಲ್ಲಿಯ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರು.
ಆಗ ತನ್ನನ್ನು ಮಹಾರಾಷ್ಟ್ರ ಪೊಲೀಸ್ ಎಂದು ಗುರುತಿಸಿಕೊಂಡ ವ್ಯಕ್ತಿ ಅವರ ಪತ್ನಿಗೆ ಕರೆ ಮಾಡಿ ‘‘ಸಾಯಿಬಾಬಾರನ್ನು ಎತ್ತಿ ಹಾಕಿಕೊಂಡು ಹೋಗಿಲ್ಲ. ಅವರನ್ನು ಬಂಸಲಾಗಿದೆ’’ ಎಂದು ಹೇಳಿದ.

 ಐದು ವರ್ಷದ ಮಗುವಿದ್ದಾಗಲೇ ಪೋಲಿಯೊ ಪೀಡಿತನಾಗಿ ದೇಹದ ಮೇಲಿನ ಸ್ವಾೀನ
ಕಳೆದುಕೊಂಡಿದ್ದ ಪ್ರೊೆಸರರನ್ನು ಹೇಳದೆ ಕೇಳದೆ ಎತ್ತಿಹಾಕಿಕೊಂಡು ಹೋಗಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರಗಳು ಸಿಗುತ್ತವೆ. ಒಂದು, ಈ ಹಿಂದೆ
ಇವರನ್ನು ಬಂಸಲು ಬಂದಾಗ ಇವರ ಮನೆ ಇರುವ ದಿಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಪ್ರಾಧ್ಯಾಪಕರು,
ವಿದ್ಯಾರ್ಥಿಗಳು, ನಾಗರಿಕರು, ಮಹಿಳೆಯರು ಉಗ್ರವಾಗಿ ಪ್ರತಿಭಟಿಸಿದರು. ಈತ ಅರ್ಪಣಾ ಮನೋಭಾವ, ಸಂಭಾವಿತ ಶಿಕ್ಷಕ ಮಾತ್ರವಲ್ಲ ತಾನು ನಂಬಿದ ಸಿದ್ಧಾಂತದ ಪ್ರತಿಪಾದಕ. ಇವರನ್ನು
ಬಂಸಕೂಡದು ಎಂದು ಜನ ವಿರೋಸಿದರು. 2009ರಲ್ಲಿ ಛತ್ತೀಸ್‌ಗಡದ ಬಸ್ತಾರ
ಪ್ರದೇಶದಲ್ಲಿ ಅಂದಿನ ಕೇಂದ್ರ ಸರಕಾರ ಗ್ರೀನ್ ಹಂಟ್ ಕಾರ್ಯಾಚರಣೆಗೆ ಮುಂದಾಯಿತು. ಇದನ್ನು
ವಿರೋಸಿದ ಪ್ರೊ.ಸಾಯಿಬಾಬಾ ಸರಕಾರದ ದೃಷ್ಟಿಯಲ್ಲಿ ಘೋರ ಅಪರಾಧ ಎಸಗಿದ್ದರು. ದೇಶದ್ರೋಹಕ್ಕೆ
ಸಮಾನವಾದ ಅಪರಾಧವನ್ನು ಈ ವಿಕಲಾಂಗ ಪ್ರೊೆಸರ್ ಎಸಗಿದ್ದರಿಂದ ಅವರ ಬಂಧನ ಅನಿವಾರ್ಯವಾಗಿತ್ತಂತೆ.
ಕಾನೂನುಬಾಹಿರ ಚುಟುವಟಿಕೆಗಳ ಮೇಲೆ ಬಂಸಲ್ಪಟ್ಟಿರುವ ಪ್ರೊ.ಸಾಯಿಬಾಬಾ ‘‘ಭಯೋತ್ಪಾದಕ’’ ಸಂಘಟನೆಗಳ ಜೊತೆ ಸಂಬಂಧ ಹೊಂದಿದ್ದರಂತೆ. ತನ್ನ
ಕಂಪ್ಯೂಟರ್ ಚಿಪ್‌ನ್ನು ಸಿಪಿಐ(ಮಾವೊವಾದಿ) ನಾಯಕಿ ಕಾಮ್ರೇಡ್ ನರ್ಮದಾಗೆ ತಲುಪಿಸಲು ಜವಾಹರಲಾಲ್
ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹೇಮ್ ಮಿಶ್ರಾಗೆ ನೀಡಿದ್ದರಂತೆ. ಈಗ ಮಿಶ್ರಾ ಕೂಡ ಜೈಲು
ಪಾಲಾಗಿದ್ದಾರೆ. ಅದೇನೇ ಇರಲಿ ಮಹಾರಾಷ್ಟ್ರದ ಜೈಲಿನಲ್ಲಿ ಒಂದು ವರ್ಷ ಕಳೆದ ಈ ಪ್ರೊೆಸರ್ ಆರೋಗ್ಯ
ಹದಗೆಟ್ಟಿದೆ. ಇವರ ಎಡಗೈ ಕಾರ್ಯನಿರ್ವಹಿಸುತ್ತಿಲ್ಲ. ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯರು ಈ
ಸಾಯಿಬಾಬಾಗೆ ಹೃದಯದ ತೊಂದರೆ ಇರುವುದರಿಂದ ತುರ್ತಾಗಿ ಆಂಟಿಯೊಪ್ಲಾಸ್ಟಿ ಚಿಕಿತ್ಸೆ
ಅನಿವಾರ್ಯವಾಗಿದೆ ಎಂದು ಶಿಾರಸು ಮಾಡಿದ್ದಾರ. ಚಿಕಿತ್ಸೆಗೆ ಜೈಲಿನ ಅಕಾರಿಗಳು ಅವಕಾಶ
ನೀಡುತ್ತಿಲ್ಲ. ಹೀಗಾಗಿ ಇವರ ಜೀವ ಅಪಾಯದಲ್ಲಿದೆ. ಆದರೂ ಈ ಪ್ರೊೆಸರ್‌ಗೆ ಜಾಮೀನು
ನಿರಾಕರಿಸಲಾಗಿದೆ. 2002ರ ನರೋಧ ಪಾಟಿಯಾ ನರಮೇಧ ಪ್ರಕರಣದಲ್ಲಿ ಜೀವಾವ
ಶಿಕ್ಷೆಗೆ ಒಳಗಾದ ಬಾಬು ಬಜರಂಗಿಗೆ ಗುಜರಾತ್ ಹೈಕೋರ್ಟ್ ಕಣ್ಣಿನ ಶಸ ಚಿಕಿತ್ಸೆಗಾಗಿ ಜಾಮೀನು
ಮೇಲೆ ಬಿಡುಗಡೆ ಮಾಡಿದೆ. ನರೋದಾ ಪಾಟಿಯಾ ಹತ್ಯಾಕಾಂಡದ ಖಳನಾಯಕಿ ಗುಜರಾತಿನ ಮಾಜಿ ಮಂತ್ರಿ
ಮಾಯಾಕೊಡ್ನಾನಿಗೂ ಗುಜರಾತ್ ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆ ಮಾಡಿದೆ.

ಆದರೆ ಈ ಪ್ರಭುತ್ವದ ಕಾನೂನಿನ ದೃಷ್ಟಿಯಲ್ಲಿ ಈ ಬಾಬು ಭಜರಂಗಿ ಮತ್ತು ಮಾಯಾ
ಕೊಡ್ನಾನಿಗಿಂತ ಈ ಪ್ರೊೆಸರ್ ಸಾಯಿಬಾಬಾ ಅಪಾಯಕಾರಿ ವ್ಯಕ್ತಿಯಾಗಿದ್ದಾರೆ. ಅಂತಲೆ ಹೃದಯ
ಶಸಚಿಕಿತ್ಸೆಗಾಗಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿಲ್ಲ. ಈ ಸಾಯಿಬಾಬಾರನ್ನು ಬಿಡುಗಡೆ ಮಾಡಿದರೆ
ದೇಶಕ್ಕೆ ಗಂಡಾಂತರ ಎಂಬುದು ಪೊಲೀಸರ ಆಕ್ಷೇಪವಾಗಿದೆ. ಅಲ್ಲಿ ಸಾಯಿಬಾಬಾರದ್ದು ಈ ಕತೆಯಾದರೆ
ಇಲ್ಲಿ ಕರ್ನಾಟಕದ ಮಂಗಳೂರಿನಲ್ಲಿ ಡಿವೈಎ್ಐ ಕಾರ್ಯಕರ್ತ ವಿಠಲ ಮಲೆಕುಡಿಯರ ವ್ಯಥೆ ಇನ್ನೊಂದು
ರೀತಿಯದು. ಗಿರಿಜನ ಸಮುದಾಯದಲ್ಲಿ ಜನಿಸಿದ ತಪ್ಪಿಗೆ ಮೂರು ವರ್ಷದ ಹಿಂದೆ ಬಿಜೆಪಿ ಸರಕಾರವಿದ್ದಾಗ
ಈ ವಿಠಲರನ್ನು ನಕ್ಸಲಿಯನೆಂದು ಪೊಲೀಸರು ವ್ಯಾಸಂಗಕ್ಕೆ ತೊಂದರೆ ನೀಡಿದರು. ಆಗ ಸಿಪಿಎಂ ಕಾರ್ಯದರ್ಶಿಯಾಗಿದ್ದ
ಪ್ರಕಾಶ ಕಾರಟ್ ಅವರು ವಿಠಲರ ಭೇಟಿಗೆ ಮಂಗಳೂರಿಗೆ ಬಂದಿದ್ದರು. ಈತ ನಕ್ಸಲರೊಂದಿಗೆ ಸಂಬಂಧ
ಹೊಂದಿಲ್ಲ ಎಂದು ಹಿಂದಿನ ಮುಖ್ಯಮಂತ್ರಿಗೆ ಮನವಿ ಮಾಡಿದಾಗ ಅವರು ಈ ಪ್ರಕರಣ ಕೈಬಿಡುವ ಭರವಸೆ
ನೀಡಿದ್ದರು. ಆದರೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾದ ನಂತರವೂ ಈ ಪ್ರಕರಣ ಕೈಬಿಡಲಿಲ್ಲ. ಈಗ
ಪೊಲೀಸರು ಅಂತಿಮ ಆರೋಪಪಟ್ಟಿಯನ್ನು ಎಪ್ರಿಲ್ 29ರಂದು ಬೆಳ್ತಂಗಡಿ
ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತಾನು ನಕ್ಸಲಿಯನಲ್ಲ ಎಂದು ವಿಠಲ ಮಲೆಕುಡಿಯ ಹೇಳಿದರೂ ಈತ
ನಕ್ಸಲಿಯ ಎಂದು ಪೊಲೀಸರು ಸಾಬೀತುಪಡಿಸಲು ಹೊರಟಿದ್ದಾರೆ. ವಿಠಲ ಮಲೆಕುಡಿಯ ಇಂದಲ್ಲ ನಾಳೆ
ನಿರ್ದೋಷಿಯಾಗಿ ಹೊರಗೆ ಬರಬಹುದು. ಆದರೆ ಬ್ರಿಟಿಷರ ಕಾಲದ ರಾಜದ್ರೋಹದ ಕಾನೂನಿನ ಮೇರೆಗೆ
ಸಾಯಿಬಾಬಾರನ್ನು ಮಾತ್ರವಲ್ಲ ಇನ್ನೂ ಅನೇಕರನ್ನು ಬಂಸಲಾಗಿದೆ. ತಮಿಳುನಾಡಿನ ಪರಿಸರವಾದಿ ಹಾಗೂ
ಮಾನವ ಹಕ್ಕು ಹೋರಾಟಗಾರ ಪಿಯೂಶ್ ಸೇಠಿಯಾ, ಮುಂಬೈನ ದಲಿತ ಹೋರಾಟಗಾರ
ಸುೀರ್ ಧವಳೆ, ಒರಿಸಾದ ವ್ಯಾಪಾರಿ ಸಂಗ್ರಮ ಮೋಹಂತಿ ಅವರನ್ನು
ಬಂಸಲಾಗಿದೆ. ಗುಜರಾತ್ ಹತ್ಯಾಕಾಂಡದ ಬಗ್ಗೆ ತಮ್ಮ ಅಂಕಣದಲ್ಲಿ ಟೀಕಿಸಿ ಬರೆದ ಖ್ಯಾತ ಚಿಂತಕ
ಆಶೀಸ್ ನಂದಿ ವಿರುದ್ಧ ಗುಜರಾತ್ ಸರಕಾರ ರಾಜದ್ರೋಹದ ಆರೋಪ ಹೊರಿಸಿದೆ. ಕೂಡಂಕುಳಂನ ಪರಮಾಣು
ಶಕ್ತಿ ಯೋಜನೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಹೋರಾಟಗಾರರ ಮೇಲೂ ರಾಜದ್ರೋಹದ ಆರೋಪ
ಹೊರಿಸಲಾಗಿದೆ. ಇದು ಕಾನೂನಿನ ದುರುಪಯೋಗ ಎಂದು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ
ಭೂಷಣ ಟೀಕಿಸಿದ್ದಾರೆ. ಇದು ಈ ದೇಶದ ಇಂದಿನ ಪ್ರಜಾ(ಮೋದಿ)ಪ್ರಭುತ್ವ.

Please follow and like us:
error