ಮಹಾದಾಸೋಹಕ್ಕೆ ಜಾಲಿಹಾಳ ಗ್ರಾಮದ ಭಕ್ತರ ರಿಂದ ೨೧ ಕ್ವಿಂಟಾಲ್ ಬೂಂದಿ ಲಾಡು ಕಾಣಿಕೆ.

ಕೊಪ್ಪಳ-23- ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಶ್ರೀಮಠಕ್ಕೆ ಈಗಾಗಲೇ ಜನಸಾಗರವೇ ಹರಿದು ಬರುತ್ತಿದೆ. ಜಿಲ್ಲೆಯ ಹಾಗೂ ನಾಡಿನ ಭಕ್ತರು ದಾಸೋಹಕ್ಕೆ ದವಸ, ಧಾನ್ಯ, ರೊಟ್ಟಿ, ತರಕಾರಿ, ಬೂಂದಿ ಲಾಡು, ಮಾದಲಿ ಹೀಗೆ ವಿವಿಧ ರೀತಿಯಲ್ಲಿ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದಾರೆ. ಸಿಂಧನೂರು ತಾಲ್ಲೂಕಿನ ಜಾಲಿಹಾಳ ಗ್ರಾಮದ ಭಕ್ತರು ೨೧ ಕ್ವಿಂಟಾಲ್ ಬೂಂದಿ
ಲಾಡುಗಳನ್ನು ದಾಸೋಹಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಕಾಣಿಕೆ ಅರ್ಪಿಸಿದ ಜಾಲಿಹಾಳ
ಗ್ರಾಮದ ಭಕ್ತರನ್ನು ಶ್ರೀಗಳು ಆಶೀರ್ವದಿಸಿದರು.

Please follow and like us:
error