ಏ.೨೧ ರಂದು ಬಸವ ಜಯಂತಿ-೨೦೧೫ ಕಾರ್ಯಕ್ರಮ.

ಕೊಪ್ಪಳ, ಏ.೨೦ (ಕರ್ನಾಟಕ ವಾರ್ತೆ) : ಬಸವ ಜಯಂತಿ ಅಂಗವಾವಾಗಿ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಭಾವಚಿತ್ರಕ್ಕೆ ಏ.೨೧ ರಂದು ಬೆಳಿಗ್ಗೆ ೯ ಗಂಟೆಗೆ ಪೂಜಾ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ ೪ ಗಂಟೆಗೆ ನಗರದ ಕೋಟೆ ರಸ್ತೆಯಲ್ಲಿರುವ ಶ್ರೀಮಹೇಶ್ವರ ದೇವಸ್ಥಾನದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಜವಾಹರ ರಸ್ತೆಯ ಮಾರ್ಗವಾಗಿ, ಆಜಾದ್ ವೃತ್ತದ ಮೂಲಕ ಶ್ರೀಗವಿಮಠದ ಆವರಣದವರೆಗೆ ನಡೆಯಿದೆ. ಬಳಿಕ ಗವಿಮಠದ ಆವರಣದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಕಛೇರಿಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Leave a Reply