ಗವಿಸಿದ್ಧ ಬಳ್ಳಾರಿ ಸ್ಮರಣೆ : ಮಹೇಶ ಬಳ್ಳಾರಿಯವರ ’ಮರ್ಮ’ ಕವನ ಸಂಕಲನ ಬಿಡುಗಡೆ

ಗವಿಸಿದ್ಧ ಎನ್. ಬಳ್ಳಾರಿ ಬಡತನದಲ್ಲಿ ಬೆಳೆದು, ಪಟ್ಟಣಪ್ರದೇಶದ ಭಾರತದಲ್ಲಿ ಓದಿ, ಗ್ರಾಮ್ಯ ಭಾರತ ಜೀವನವನ್ನು ಆಯ್ಕೆಮಾಡಿಕೊಂಡವರು. ಸರಳ ವ್ಯಕ್ತಿತ್ವವಾಗಿದ್ದರೂ, ಹರಿತವಾದ ಭಾಷೆ, ಹೋರಾಟಗಳ ಮೂಲಕ ಕೊಪ್ಪಳವನ್ನು ಸಾಹಿತ್ಯ ಶ್ರೀಮಂತಿಕೆಗೊಳಿಸಲು ಶ್ರಮಿಸಿದವರು. ಕತ್ತಲು ದೇಶದ ಪದ್ಯಗಳು, ಕಪ್ಪುಸೂರ್ಯ, ಈ ಮಣ್ಣು ಅಪ್ಪಿಕೊಳ್ಳುವ ಮುನ್ನ ಕೃತಿಗಳನ್ನು ಸಾಹಿತ್ಯ ಪ್ರ[ಪಂಚಕ್ಕೆ ಕೊಡುವುದರ ಮೂಲಕ ತಮ್ಮತನದ ಗಟ್ಟಿತನವನ್ನು ತೋರಿಸಿದರು. ಅವರ ಮಗ ಮಹೇಶ ಬಳ್ಳಾರಿಯೂ ಸಹ ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದು, ಪರಂಪರೆಯ ಮುಂದುವರಿಕೆಯಾಗಿದೆ ಎಂದು ಸಾಹಿತಿಗಳಾದ ಕಲಬುರ್ಗಿಯ ಪ್ರೊ. ಸೂಗಯ್ಯ ಹಿರೇಮಠ ನುಡಿದರು.
ಅವರು ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ದಿ. ೧೪-೦೩-೨೦೧೨ ರಂದು ಆಯೋಜಿಸಿದ್ದ ಗವಿಸಿದ್ಧ ಎನ್. ಬಳ್ಳಾರಿಯವರ ೮ ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಹೇಶ ಬಳ್ಳಾರಿಯವರ ’ಮರ್ಮ’ ಕವನ ಸಂಕಲನ ಬಿಡುಗಡೆ ಮಾಡಿ, ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸರಕಾರಿ ವಕೀಲ ಬಿ.ಎಸ್. ಪಾಟೀಲರವರು ’ಮರ್ಮ’ ಕೃತಿಯ ಬಗ್ಗೆ ಮಾತನಾಡಿ ಮಹೇಶ ಬಳ್ಳಾರಿಯವರ ’ಮರ್ಮ’ ಕವನ ಸಂಕಲನ ಅವರು ಬೆಳೆಯುತ್ತಿರುವ ಹಾದಿ ತೋರಿಸುತ್ತಿದೆ. ಇಲ್ಲಿನ ಕವಿತೆಗಳು ಅರ್ಥಪೂರ್ಣ, ಮಾರ್ಮಿಕ, ವಿಡಂಬನೆ, ವಿಮರ್ಶೆ ಗುಣಗಳನ್ನು ಒಳಗೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮಾತನಾಡಿ ಮಹೇಶನ ಬಹುಮುಖ ಪ್ರತಿಭೆ, ಆತನಿಗೆ ಯಶಸ್ಸನ್ನು ಒದಗಿಸಿಕೊಡುತ್ತದೆ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ಡಾ. ಕೆ.ಬಿ. ಬ್ಯಾಳಿ ವಹಿಸಿದ್ದರು. ಸ್ವಾಗತವನ್ನು ಎಚ್.ಎಸ್. ಪಾಟೀಲ, ಪ್ರಾಸ್ತಾವಿಕ ಅಲ್ಲಮಪ್ರಭು ಬೆಟ್ಟದೂರು ಮಾಡಿದರು. ಪ್ರಾರ್ಥನೆಯನ್ನು ಕು. ಚಂದನಾ ದೇಸಾಯಿ, ಕು. ಭಾವನಾ ಪಾಟೀಲ ಮತ್ತು ನಿರೂಪಣೆಯನ್ನು ಶಿಕ್ಷಕ ಮಾನಪ್ಪ ಬೆಲ್ಲದ್ ನೆರವೇರಿಸಿದರು.
ವಿಠ್ಠಪ್ಪ ಗೋರಂಟ್ಲಿ, ಡಾ. ಮಹಾಂತೇಶ ಮಲ್ಲನಗೌಡರ, ರಾಜಶೇಖರ ಅಂಗಡಿ, ಈಶ್ವರ ಹತ್ತಿ, ಶಾಂತಾದೇವಿ ಹಿರೇಮಠ, ಎ. ಧನಂಜಯನ್, ಪಿ.ವಿ. ಹಿರೇಮಠ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply