fbpx

ಶಿಕ್ಷಣ ಮಾಧ್ಯಮ ಮರು ಪರಿಶೀಲನೆಗೆ ಎಸ್.ಎಫ್.ಐ ಒತ್ತಾಯ

ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮದ ಆಯ್ಕೆ ಪಾಲಕರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ಆಘಾತಕಾರಿ ತೀರ್ಪನ್ನು ನೀಡಿದೆ. ಈ ತೀರ್ಪಿನಿಂದಾಗಿ ಖಾಸಗಿ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಅಷ್ಟೆ ಅಲ್ಲದೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗೆ ದಕ್ಕೆ ಉಂಟಾಗಲಿದೆ. 
ಹಣ ಮಾಡುವ ದಂದೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಭಾಷೆಯಾಗಿ ಇಂಗ್ಲೀಷನ್ನು ಮಾಧ್ಯಮವಾಗಿ ಕಲಿಸುತ್ತೆವೆ ಎಂದು ಹೇಳುವ ಮೊಲಕ ಮಾತೃಭಾಷೆಗೆ ದ್ರೋಹ  ಬಗೆಯಲು ಹೋರಟಿದ್ದಾರೆ. ಇದು ಕನ್ನಡ ವಿರೋಧಿಯಾಗಿದೆ. ಇಂಗ್ಲೀಷ್‌ನಲ್ಲಿ ಮಾತನಾಡುವುದೇ ಜ್ಞಾನವಲ್ಲ. ಇಂಗ್ಲೀಷ್‌ನ್ನು ಮಾಧ್ಯಮವನ್ನಾಗಿ ಮಾಡಿದರೆ ಪ್ರತಿಭೆಗೆ ದಕ್ಕೆಯಾಗಲಿದೆ ಎಂಬುದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಅರಿಯಬೇಕಿದೆ. ಇಂಗ್ಲೀಷ್ ಮಾದ್ಯಮ ವ್ಯಾಪಾರದ ಸರಕಾಗಿರುವುದರಿಂದ  ಶಿಕ್ಷಣ ಕ್ಷೇತ್ರ ವ್ಯಾಪಾರಿಕರಣಗೊಳ್ಳಲಿದೆ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್ ಮಾಧ್ಯಮವನ್ನು ಕೈ ಬಿಟ್ಟು ಕನ್ನಡ ಮಾಧ್ಯಮದ ಬೋಧನೆಗೆ ಆಧ್ಯತೆ ನೀಡಿ ಇಂಗ್ಲೀಷ್‌ನ್ನು ಭಾಷೆಯಾಗಿ ಕಲಿಸಬೇಕಿದೆ. 
ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವದರಿಂದ ಸರಳವಾಗಿ ಸುಲಲಿತವಾಗಿ ಕಲಿಯಲು ಸಾಧ್ಯ. ಇದರಿಂದ ಮಗುವಿನ ಬೌದ್ದಿಕ ಮತ್ತು ಮಾನಸಿಕ ಸಾಮರ್ಥ್ಯ ವಿಕಾಸಗೊಳ್ಳುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಸುರ್ಪ್ರಿಂ ಕೋರ್ಟಗೆ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು ಎಂದು ಎಸ್,ಎಫ್.ಐ ಒತ್ತಾಯಿಸುತ್ತದೆ. ಮರು ಪರಿಶೀಲನೆಗೆ ಅರ್ಜಿ ಹಾಕಿದರಷ್ಟೆ ಪ್ರಯೋಜನೆ ವಾಗುವುದಿಲ್ಲ. ಸರ್ಕಾರ ಸಮರ್ಥ ವಾದವನ್ನು ಮಂಡಿಸಿ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡ ಮಾಧ್ಯಮದ ಕಲಿಕೆಯನ್ನು ಕಡ್ಡಾಯಗೊಳಿಸಿ ಇಂಗ್ಲೀಷ್‌ನ್ನು ಭಾಷೆಯಾಗಿ ಕಲಿಸಲಾಗುವುದು ಎಂದು ಮನವರಿಕೆ ಮಾಡಿಕೊಡಬೇಕಿದೆ. ಹಾಗಾಗಿ ಕೊಡಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ  ಕೋರ್ಟನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಕನ್ನಡ ಮಾಧ್ಯಮ ಬೋಧನೆಗೆ ಮುಂದಾಗಬೇಕು. ಎಂದು ಎಸ್.ಎಫ್.ಐ ರಾಜ್ಯಸರಕಾರಕ್ಕೆ  ಮೂಲಕ ಒತ್ತಾಯಿಸಿದೆ.
Please follow and like us:
error

Leave a Reply

error: Content is protected !!