ಇನ್ನರ್ ವೀಲ್ಹ್ ವತಿಯಿಂದ ೬೫ನೇ ಗಣರಾಜ್ಯೋತ್ಸದ ಆಚರಣೆ

 ೬೫ನೇ ಗಣರಾಜ್ಯೋತ್ಸದ ಅಂಗವಾಗಿ ಇನ್ನರ್ ವೀಲ್ಹ್ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ನಿಮಿತ್ತ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲರೂ ದೆದೇಗಲ್ ಶಾಲೆಗೆ ಹೋಗಿ ದ್ವಜಾರೋಹಣ ಮಾಡಿದೆವು. ಹಾಗೂ ಶಾಲೆಗೆ ಮೈಕ್ರೋಸ್ಕೋಪ್‌ನ್ನು ಕಾಣಿಕೆಯಾಗಿ ಇನ್ನರ್ ವಿಲ್ಹ್ ಅಧ್ಯಕ್ಷೆ ಶ್ರೀಮತಿ ಮಮತಾ ಕುದರಿಮೋತಿ ಇವರು ಸದಸ್ಯರೋಡನೆ ಅರ್ಪಿಸಿದರು. 
                          ನಂತರ ಭಾಷಣ, ಹಾಡು, ನಾಟಕ ಇನ್ನಿತರ ಕಾರ್ಯಕ್ರಮಗಳಲ್ಲಿ ಪ್ರಥಮ ಸ್ಥಾನಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು ಮತ್ತು ಅತಿಥಿಗಳು ಮಕ್ಕಳಿಗೆ ಹಿತನುಡಿಗಳನ್ನು ಹೇಳಿದರು, ಶಾಲೆ ಮುಖ್ಯೋಪಾಧ್ಯಯರು ಹಾಗೂ ಸಹ ಶಿಕ್ಷಕರು ಗ್ರಾಮದ ಎಸ್.ಡಿ.ಇ.ಎಂ. ಸದಸ್ಯರು ಊರಿನ ಮುಖಂಡರು ಹಾಗೂ ಇನ್ನರ್ ವೀಲ್ಹ್ ಸದಸ್ಯರುಗಳಾದ ಕವಿತಾ ಶೇಟ್ಟರ್, ಹೇಮಲತಾ ನಾಯಕ್, ಕರುಣಾಂ ಮಧುರಾ, ವೈಷ್ಣವಿ ಹುಲಿಗಿ, ರೂಪಾ ಬಣಕಾರ, ಉಪಸ್ಥಿತರಿದ್ದರು 

Leave a Reply