ಛತ್ರಪತಿ ಶಿವಾಜಿ ಶಾಖೆಯ ವಾರ್ಷಿಕೋತ್ಸವ ಹಾಗೂ ದ್ವಜ ಪ್ರಧಾನ ಉತ್ಸವದ ಕಾರ್ಯಕ್ರಮ

ಕೊಪ್ಪಳ :  ಇತ್ತೀಚಿಗೆ  ಭಾಗ್ಯನಗರದಲ್ಲಿ  ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಛತ್ರಪತಿ ಶಿವಾಜಿ ಶಾಖೆಯ ವಾರ್ಷಿಕೋತ್ಸವ ಹಾಗೂ ದ್ವಜ ಪ್ರಧಾನ ಉತ್ಸವದ ಕಾರ್ಯಕ್ರಮವು ವಿಜೃಂಬಣೆಯಿಂದ ನಡೆಯಿತು.  
ಕಾರ್ಯಕ್ರಮದ ಮೊದಲು ಗ್ರಾಮದಲ್ಲಿ ನಡೆದ ಸ್ವಯಂ ಸೇವಕರ ಪಥ ಸಂಚಲನಕ್ಕೆ ಸಾರ್ವಜನಿಕರಿಂದ ದಾರಿಯುದ್ಧಕ್ಕೂ ರಂಗೋಲಿ ಅಲಂಕಾರ ಹಾಗೂ ಭಗವಾ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಕಾರ್ಯಕ್ರಮವು ಉಮಾಕಾಂತಸಾ ಆರ್ ಕಠಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಗೂ ಬಳ್ಳಾರಿ ವಿಭಾಗದ ಸಂಘ ಚಾಲಕರಾದ ಡಾ|| ಹೆಚ್ ಎನ್ ಪಿ ವಿಠಲ ಅವರು ನಮ್ಮ ದೇಶದ ಹಿಂದೂಗಳು ಅಲ್ಪಸಂಖ್ಯಾತರಾದಲ್ಲಿ ಗಂಡಾತರ ತಪ್ಪಿದಲ್ಲ ಎಂದು ತಮ್ಮ ಬೌಧಿಕ ಕಾರ್ಯಕ್ರಮದಲ್ಲಿ ತಿಳಿಸಿದರು. ಮತ್ತು ವೇಧಿಕೆಯಲ್ಲಿ ಬಸವರಾಜ ಡಂಬಳ, ಸಂಘದ ಕೊಪ್ಪಳ ಸಂಘ ಚಾಲಕರು ಹಾಗೂ ಸಂಗಯ್ಯ  ವಸ್ತ್ರದ ಕೊಪ್ಪಳ ನಗರ ಸಹ ಸಂಘ ಚಾಲಕರು ಉಪಸ್ಥಿತರಿದ್ದರು.    ಕಾರ್ಯಕ್ರಮದ ಆರಂಭದಲ್ಲಿ ಗಣವೇಶದಾರಿ ಸ್ವಯಂ ಸೇವಕರಿಂದ ಆಕರ್ಷಕ ಶಾರೀರಿಕ ಪ್ರದರ್ಶನ ನಡೆಯಿತು.ಕಾರ್ಯಕ್ರಮದಲ್ಲಿ ಭಾಗ್ಯನಗರದ ಗ್ರಾಮಸ್ಥರು ಹಾಗೂ ಗುರು ಹಿರಿಯರು ಮತ್ತು  ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 
Please follow and like us:
error