You are here
Home > Koppal News > ಆಡಳಿಕ ಬಾಷೆಯಾಗಿ ಕನ್ನಡ: ಇಂದು ವಿಚಾರಸಂಕಿರಣ

ಆಡಳಿಕ ಬಾಷೆಯಾಗಿ ಕನ್ನಡ: ಇಂದು ವಿಚಾರಸಂಕಿರಣ

ಕೊಪ್ಪಳ ನ.: ಕೊಪ್ಪಳ ವಾರ್ತಾ ಇಲಾಖೆಯು ಸರ್ಕಾರಿ ಪ್ರೌಡ ಶಾಲೆ ಭಾನಾಪೂರ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯತ್ ಭಾನೂಪೂರ ಇವರ ಸಂಯುಕ್ತ ಅಶ್ರಯದಲ್ಲಿ “ಆಡಳಿತ ಭಾಷೆಯಾಗಿ ಕನ್ನಡ”ಕುರಿತು ವಿಚಾರ ಸಂಕಿರಣವನ್ನು ನ.೨೭ ರಂದು ಬೆಳಗ್ಗೆ ೧೦ ಗಂಟೆಗೆ ಭಾನಾಪೂರ ಸರ್ಕಾರಿ ಫ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ.
ವಿಚಾರ ಸಂಕಿರಣ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಅಚಾರ್ ಅವರು ನೆರವೇರಿಸುವರು. ಗ್ರಾ.ಪಂ ಅಧ್ಯಕ್ಷೆ ಪಾರ್ವತಮ್ಮ ಶಿ ಬಗನಾಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯಂಕಣ್ಣ ಯರಾಶಿ, ತಾ.ಪಂ ಸದಸ್ಯ ಪ್ರಭಾಕರ್ ಆಚಾರ್, ಗ್ರಾ ಪಂ ಉಪಾಧ್ಯಕ್ಷ ಭೀಮಣ್ಣ ಕೋಮಲಾಪೂರ ಸರ್ಕಾರಿ ಫ್ರೌಡಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಬಸವರಾಜ ಕವಲೂರ ಸ,ಹಿ.ಪ್ರಾ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಶೇಖರಪ್ಪ ಗುಡಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುಭಾಷಚಂದ್ರ ಹೆಚ್ .ಸ.ಹಿ.ಶಾಲೆ ಮುಖ್ಯೋಪಾಧ್ಯಾಯ ಎಂ.ಆರ್.ವಿರಣ್ಣ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು ಭಾಗ್ಯನಗರ ಸ.ಪ.ಪು.ಕಾಲೇಜ್ ಪ್ರಾಚಾರ್ಯರ ಉಪನ್ಯಾಸಕ ಸಿ.ವಿ.ಜಡಿಯವರ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸುವರು ಎಂದು ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ತಿಳಿಸಿದ್ದಾರೆ.

Leave a Reply

Top