ಅರುಣಾ ನರೇಂದ್ರ ಅವರಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

ಕೊಪ್ಪಳ :- ಕೊಪ್ಪಳದ ಕವಯತ್ರಿ ಶ್ರೀಮತಿ ಅರುಣಾನರೇಂದ್ರ ಅವರ ಶ್ರೀ ಧೀರ ಬಿರೇಶ್ವರ ವಚನಗಳು ಸಂಕಲನಕ್ಕೆ ೨೦೧೨ ರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಟ್ರಸ್ಟ್ ಇವರು ಕೊಡ ಮಾಡುವ  ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ನೆಲ, ಜೆಲ, ಭಾಷೆ, ಹಾಗೂ ಜನ ಜೀವನಗಳ ಬಗ್ಗೆ ಕಾಳಜಿ ಇಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿದೆ ೦೯/೧೨/೨೦೧೨ ಬೆಂಗಳೂರು ನಗರದ ಸಂಸ ಬಯಲು ರಂಗಮಂದಿರದಲ್ಲಿ ಷ. ಬ್ರ. ಮಲ್ಲಿಕಾರ್ಜುನ ದೇವರು ಸರ್ಪ  ಭೂಷಣಮಠ , ಶ್ರೀ.ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು ರಂಬಾಪುರಿಮಠ, ಗಾನವಿಧೋಷಿ ಜಿ.ಶಾಮಲಾಬಾವೆ, ಸಂಗಮೇಶ ಉಪಾಸೆ ಹಾಗೂ ಟ್ರಸ್ಟ್ ಅಧ್ಯಕ್ಷರು  ಮುಂತಾದ ಗಣ್ಯರು  ವೇಧಿಕೆಯ ಮೇಲೆ ಉಪಸ್ಥಿತರಿದ್ದರು.
    ಈ ಗಾಗಲೇ ಶ್ರೀಮತಿ ಅರುಣಾ ನರೇಂದ್ರ ಅವರ ಕೃತಿಗಳೀಗೆ ಅನೇಕ ಪ್ರಶಸ್ತಿಗಳು ಸಂದಿವೆ. 

Leave a Reply