ಸರ್ವರಿಗೂ ಶಿಕ್ಷಣದ ಹಕ್ಕು – ಜಿ. ಎಚ್. ವೀರಣ್ಣ

 ನ್ಯೂ ಆಕ್ಸಫರ್ಡ ಶಾಲೆಯ ೧೧ ನೆಯ ವಾರ್ಷಿಕೋತ್ಸವಕ್ಕೆ ಉದ್ಘಾಟಕರಾಗಿ ಆಗಮಿಸಿದ   ಜಿ. ಎಚ್. ವೀರಣ್ಣ ಉಪನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆರ್.ಟಿ.ಇ ಬಗ್ಗೆ ಮಾತನಾಡಿ ಎಲ್ಲಾ ಖಾಸಗಿ ಶಾಲೆಯವರು  ಆರ್.ಟಿ.ಇ ಅಡಿಯಲ್ಲಿ ಬಡ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಶೇ. ೨೫ ರಷ್ಟು ಪ್ರವೇಶವನ್ನು ಕಡ್ಡಾಯವಾಗಿ ಕಲ್ಪಿಸಬೇಕೆಂದು ಒತ್ತು ಕೊಟ್ಟು ಹೇಳಿದರು. ಹಾಗೂ ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಈ ಸಂಧರ್ಬದಲ್ಲಿ ಶ್ರೀಮತಿ ನೇತ್ರಾವತಿ ಪಾಟೀಲ, ಪಿ.ಎಸ್.ಐ ಟ್ರಾಪೀಕ್ ಪೊಲೀಸ್ ಕೊಪ್ಪಳ , ಎಸ್.ಡಿ. ಹಿರೇಮಠ ಹಿರಿಯ ಉಪನ್ಯಾಸಕರು, ಬಾಲಕಿಯರ ಪ. ಪೂ. ಕಾಲೇಜ ಹಾಗು ವಿಶ್ರಾಂತ ಪ್ರಿನ್ಸಿಪಾಲರಾದ ಸೆ.ವಿ. ಜಡಿಮಠರವರು ಉಪಸ್ಥಿತರಿದ್ದರು. 
ನ್ಯೂ ಆಕ್ಸಪರ್ಢ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಸುಮನ್ ಎಸ್. ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

Leave a Reply