ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನೆ

೨೦೧೩-೧೪ ನೇ ಸಾಲಿನ ವಿದ್ಯಾರ್ಥಿ ಸಂಘ , ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭವನ್ನು ದಿನಾಂಕ ೨೯-೦೮-೨೦೧೩ ಗುರವಾರ ಮುಂಜಾನೆ ೧೦:೩೦ ಕ್ಕೆ ಸರಕಾರಿ ಪಾಲಿಟೆಕ್‌ನಿಕ್  ದದೇಗಲ್, ಕೊಪ್ಪಳದಲ್ಲಿ ನೆರವೇರಿಸಲಾಯಿತು. 
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಉಮೇಶ ಬಾಬು ಪ್ರಾಚಾರ್ಯರು, ಐ.ಎಸ್.ಎಸ್.ಎ.ಆರ್ ಎಂ.ಎಸ್.ಡಬ್ಲ್ಯೂ ಕಾಲೇಜ ಕೊಪ್ಪಳ ಇವರು ನೆರವೇರಿಸಿ ವಿದ್ಯಾರ್ಥಿಗಳು ಸರಕಾರಿ ಕೆಲಸಕ್ಕಾಗಿ ಓದಬೇಡಿ, ಹತ್ತಾರು ಜನಕ್ಕೆ ಕೆಲಸಕೊಡುವಂತ ಉದ್ಯಮಿಗಳಾಗಿ ಎಂದು  ತಮ್ಮ ಉಪನ್ಯಾಸದಲ್ಲಿ ಕರೆನೀಡಿದರು. ನಂತರ ವಾಸುದೇವ್ ಎನ್. ಆಯ್ಕೆ ಶ್ರೇಣಿ ಉಪನ್ಯಾಸಕರು ಜೀವನದಲ್ಲಿ ಶಿಸ್ತು ಮುಖ್ಯ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಮತ್ತು ಸಂತೋಷ ಹೆಚ್.ಎಂ ಉಪನ್ಯಾಸಕರು ಹಾಗೂ ಎಸ್.ಡಬ್ಲ್ಯೂ. ಓ ಪ್ರಸ್ತಾವಿಕ ಬಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಆರ್. ಶಿವಕುಮಾರ್ ಪ್ರಾಚಾರ್ಯರು , ಸರಕಾರಿ ಪಾಲಿಟೆಕ್‌ನಿಕ್ ಕೊಪ್ಪಳ ಇವರು ವಿದ್ಯಾರ್ಥಿಗಳ ಜೀವನ ಸಾರ್ಥಕವಾಗಬೇಕು, ಶಿಸ್ತು ಸಂಯಮದಿಂದ ಕೂಡಿರಬೇಕು. ಹಾಗೂ ಸರ್ ಎಂ ವಿಶಶರಯ್ಯನವರ ಜೀವನ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕುಎಂದರು.
ಇದೇ ಸಂದರ್ಭದಲ್ಲಿ ೨೦೧೨ -೨೦೧೩ ನೇ ಸಾಲಿನಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗಣಕಯಂತ್ರ ವಿಭಾಗದಲ್ಲಿ ೨ ನೇ ಸೆಮಿಸ್ಟರನಲ್ಲಿ ಪವಿತ್ರಾ, ನಾಲ್ಕನೆ ಸೆಮಿಸ್ಟರನಲ್ಲಿ ರಾಘವೇಂದ್ರ, ೬ ನೇಸೆಮಿಸ್ಟರನಲ್ಲಿ ಸಂತೋಷ, ದೂರ ಸಂಪರ್ಕ ವಿಭಾಗದಲ್ಲಿ ೨ ನೇ ಸೆಮಿಸ್ಟರನಲ್ಲಿ ಅಂಬೋರಿ ರೇಷ್ಮಾ, ನಾಲ್ಕನೆ ಸೆಮಿಸ್ಟರನಲ್ಲಿ ರವಿಕುಮಾರ, ೬ ನೇಸೆಮಿಸ್ಟರನಲ್ಲಿ ಎನ್. ವಿಶ್ವಾಮನಿ, ಯಾಂತ್ರಿಕ ವಿಭಾಗದಲ್ಲಿ ೨ ನೇ ಸೆಮಿಸ್ಟರನಲ್ಲಿ ನಾಗರಾಜ ಕೆ., ನಾಲ್ಕನೆ ಸೆಮಿಸ್ಟರನಲ್ಲಿ ಹನಮಪ್ಪ, ೬ ನೇಸೆಮಿಸ್ಟರನಲ್ಲಿ ಅನೀಲ ಕುಮಾರ, ಗಣಿತ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗೂ ಕೂಡಾ ಬಹುಮಾನ ವಿತರಿಸಲಾಯಿತು. ಯಾಂತ್ರಿಕ ವಿಭಾಗದಿಂದ ಆನಂದ, ಗೌಡರ ಯರಿಸ್ವಾಮಿ,  ಶಿವಕುಮಾರ, ಸೈಯದ್ ಮಹಮ್ಮದ ಕಲಂದಾರ್, ದೂರ ಸಂಪರ್ಕ ವಿಭಾಗದಿಂದ ಅಂಬೋರಿ ರೇಷ್ಮಾ, ಶ್ರೀನಿವಾಸ, ಇವರಿಗೂ ಕೂಡ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ರಮೇಶ ಟಿ. ಉಪನ್ಯಾಸಕರು ದೂರ ಸಂಪರ್ಕ ವಿಭಾಗ, ಇವರು ನೆರವೇರಿಸಿದರು. ಪ್ರಕಾಶ ಗೌಡ ಸ್ವಾಗತಿಸಿದರು, ಶ್ರೀಕಂಟ ಸ್ವಾಮಿ ಮತ್ತು ನೇಹಾ ನಿರೂಪಿಸಿದರು, ಶ್ರೀನಿವಾಸ ವಿದ್ಯಾರ್ಥಿ ಸಂಘದ ಅಧ್ಯಕ್ಷರು ವಂದಿಸಿದರು. 

Leave a Reply