ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ : ಬಾಲಮಂದಿರದ ಮಕ್ಕಳಿಗೆ ನೋಟ್‌ಬುಕ್ ವಿತರಣೆ

ಕೊಪ್ಪಳ ೧೬, –  ಸೈಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬದ ನಿಮಿತ್ತ ಇಲ್ಲಿನ ಬನ್ನಿಕಟ್ಟಿ ಬಳಿಯಿರುವ ಅನಾಥ ಮಕ್ಕಳ ಬಾಲ ಮಂದಿರದ ಬಾಲಕರಿಗೆ ಶುಕ್ರವಾರ ಸಂಜೆ ನೋಟಬುಕ್ ವಿತರಣೆ ಮಾಡಲಾಯಿತು.
ಬಾಲಮಂದಿರದಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಮಕ್ಕಳಿಗೆ ನೋಟ್‌ಬುಕ್, ಪೆನ್ ಹಾಗೂ ಸಿಹಿ ವಿತರಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷರು ಹಾಗೂ ಜಾತ್ಯತೀತ ಜನತಾದಳದ ಯುವ ಮುಖಂಡರಾದ ಕೆ.ಎಂ.ಸೈಯ್ಯದ್ ಅವರು, ಕಷ್ಟಪಟ್ಟು ಅಭ್ಯಸಿಸುವ ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಎದುರಾಗಿದೆ. ಆದ್ದರಿಂದ ಮಕ್ಕಳು ಆಟದೊಂದಿಗೆ ಪಾಠಕ್ಕೂ ಹೆಚ್ಚಿನ ಮಹತ್ವ ಕೊಡಬೇಕು. ಅಧ್ಯಯನಶೀಲರಾಗಿ ಪ್ರತಿಯೊಂದು ವಿಷಯದಲ್ಲೂ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಕಲಿಸಿದ ಗುರುಗಳಿಗು, ಕಲಿತ ಶಾಲೆಗೂ ಕೀರ್ತಿ ತರಬೇಕೆಂದು ಸಲಹೆ ಮಾಡಿದರು.ರಾಜ್ಯ ಮತ್ತು ರಾಷ್ಟ್ರಕ್ಕೆ ಇಂದು ಉನ್ನತವಾದ ವಿಚಾರಗಳನ್ನು, ಉನ್ನತವಾದ ಉದ್ದೇಶಗಳನ್ನು ಹೊಂದಿರುವ ರಾಜಕಾರಣಿಗಳ ಅವಶ್ಯಕತೆಯಿದೆ. ಅಂತಹ ವಿಚಾರಧಾರೆಯನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಅತೀ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಹಲವಾರು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಇಂದಿಗೂ ಕೂಡ ಜನಮಾನಸದಲ್ಲಿ ಉಳಿದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರು ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿವುಳ್ಳವರಾಗಿದ್ದಾರೆ ಎಂದು ಕೆ.ಎಂ.ಸೈಯ್ಯದ್ ಹೇಳಿದರು. 
ಮಕ್ಕಳಿಗೆ ಸಿಹಿ ತಿನ್ನಿಸುವುದರೊಂದಿಗೆ ನೋಟ್‌ಬುಕ್, ಪೆನ್ ವಿತರಿಸಿದರು. ಇದಕ್ಕೂ ಮೊದಲು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿಗಳಾದ ಮಹೇಶ, ಪರವೀನ್ , ಪಕ್ಷದ ಕಾರ್‍ಯಕರ್ತರಾದ ಎಂ.ಡಿ.ಹುಸೇನ್, ರಾಜೇಶ್, ವಾಸೀಮ್, ಮಹ್ಮದ್ ಗೌಸ್,ಕಿಲ್ಲೇದಾರ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
Please follow and like us:
error