ಶಾಲೆಯಲ್ಲಿಯೇ ಜಾತಿ ಪ್ರಮಾಣಪತ್ರ :

 ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ
ಜಾತಿ-ಆದಾಯ ಪ್ರಮಾಣಪತ್ರಕ್ಕೆ ನಾಡಕಚೇರಿ,ತಹಸಿಲ್ದಾರರ ಕಚೇರಿಗೆ ಅಲೆದಾಡುವುದನ್ನು
ತಪ್ಪಿಸಲು, ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಗೆ ಜಾತಿ-ಆದಾಯ ಪ್ರಮಾಣಪತ್ರವನ್ನು
ವಿತರಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮ ಸರಿಯಾದ ಕ್ರಮದಲ್ಲಿ ಅನುಷ್ಠಾನಗೊಂಡು,
ವಿದ್ಯಾರ್ಥಿಗಳಿಗೆ ಸಕಾಲದಲ್ಲಿಯೇ ಪ್ರಮಾಣಪತ್ರ ವಿತರಣೆಯಾಗಬೇಕು ಎಂದರು.  ಇದಕ್ಕೆ
ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರು, ಈಗಾಗಲೆ ಎಲ್ಲ
ಶಾಲೆಗಳ ವಿದ್ಯಾರ್ಥಿಗಳಿಗೆ ಅರ್ಜಿ ನಮೂನೆಯನ್ನು ವಿತರಿಸಲಾಗಿದ್ದು, ಆಯಾ ಗ್ರಾಮ
ಲೆಕ್ಕಾಧಿಕಾರಿಗಳೇ ಶಾಲೆಯಿಂದ ಅರ್ಜಿಯನ್ನು ಸ್ವೀಕರಿಸಿ, ಪರಿಶೀಲಿಸಿ, ನಂತರ
ತಹಸಿಲ್ದಾರರಿಂದ ಅನಮೋದನೆ ಪಡೆದು, ಲ್ಯಾಮಿನೇಷನ್ ಮಾಡಿದ ಪ್ರಮಾಣಪತ್ರವನ್ನು ಆಯಾ
ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಿತರಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ
ಎಂದರು.

ಬೇಸಿಗೆಯಲ್ಲಿ ಕುಡಿಯುವ ನೀರು : ಈಗಾಗಲೆ ಬೇಸಿಗೆ ಸಮೀಪಿಸಿದ್ದು,
ಜಿಲ್ಲೆಯಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಅನುಭವಿಸುವ ಗ್ರಾಮಗಳು ಹಾಗೂ
ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದ
ರೀತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಜಿಲ್ಲೆಯಲ್ಲಿ ಈಗಾಗಲೆ
ಜಾರಿಯಲ್ಲಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮ ಯೋಜನೆಗಳ ಒಟ್ಟು ೧೫ ಯೋಜನೆಗಳ
ಪೈಕಿ ೫ ಮಾತ್ರ ಪೂರ್ಣಗೊಂಡಿದ್ದು, ಇನ್ನೂ ೯ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.  ಈ
ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ, ನೀರು ಪೂರೈಕೆ ಪ್ರಾರಂಭಿಸಲು ಅಗತ್ಯ ಕ್ರಮ
ಕೈಗೊಳ್ಳಬೇಕು.  ಹೊಸ ಕೊಳವೆ ಬಾವಿ ಕೊರೆಯಿಸುವ ಬದಲು, ಫ್ಲಶಿಂಗ್ ಹಾಗೂ
ಹೈಡ್ರೋಫ್ಯಾಕ್ಚರಿಂಗ್ ಕ್ರಮಕ್ಕೆ ಆದ್ಯತೆ ನೀಡಬೇಕು ಎಂದು ಪಿಆರ್‌ಇಡಿ ಕಾರ್ಯಪಾಲಕ
ಅಭಿಯಂತರರಿಗೆ ಸೂಚನೆ ನೀಡಿದರು.
ಅನುದಾನ ವ್ಯರ್ಥಗೊಳಿಸಬೇಡಿ : ಪ್ರಸಕ್ತ ಆರ್ಥಿಕ
ವರ್ಷ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಯಾವುದೇ ಯೋಜನೆಗಳ ಅನುದಾನ ವಾಪಸ್
ಹೋಗದಂತೆ, ಈಗಿನಿಂದಲೇ ಕ್ರಮ ಕೈಗೊಳ್ಳಬೇಕು.  ನಿಗದಿತ ಯೋಜನೆಗಳ ಭೌತಿಕ ಮತ್ತು ಆರ್ಥಿಕ
ಗುರಿ ಸಾಧನೆ ಕಡ್ಡಾಯವಾಗಿ ಆಗಬೇಕು.  ನೀತಿ ಸಂಹಿತೆಯ ನೆಪವೊಡ್ಡಿ, ಅನುದಾನ
ವ್ಯರ್ಥಗೊಳಿಸಿದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು.

Leave a Reply