ಕಸಾಪ ಚುನಾವಣೆ : ಜಿಲ್ಲೆಗೆ ರಾಜಶೇಖರ, ರಾಜ್ಯಕ್ಕೆ ಶೇಖರಗೌಡ ಪಾಟೀಲ ಸ್ಪರ್ಧೆ

ಕೊಪ್ಪಳ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲೀಪಾಟಿಲ್ ಬಣದಿಂದ ರಾಜಶೇಖರ ಅಂಗಡಿ  ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಬಣ ರಾಜಶೇಖರ ಅಂಗಡಿಯ ಗೆಲುವು ಖಚಿತವಾಗಿದ್ದು  ಅವರೊಬ್ಬ  ಅತ್ಯುತ್ತಮ ಸಂಘಟಕರಾಗಿದ್ದಾರೆ. ಹೀಗಾಗಿ ನಮ್ಮೆಲ್ಲರ ಬೆಂಬಲ ಅವರಿಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ್  ಈ ಸಲ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ದಿಸುತ್ತಿದ್ದು ಉತ್ತರ ಕರ್ನಾಟಕದಿಂದ ಸ್ಫರ್ದಿಸುತ್ತಿರುವ ಏಕೈಕ ಅಭ್ಯರ್ಥಿ ತಾವಾಗಿರುವುದರಿಂದ ಸೇವೆಗೆ ಅವಕಾಶ ನೀಡಬೇಕು  ಮತ್ತು ಬೆಂಬಲಿಸಬೇಕು ಎಂದು ಮನವಿ ಮಾಡಿದರು
  ಪತ್ರಿಕಾಗೋಷ್ಠಿಯಲ್ಲಿ ವಿಠ್ಠಪ್ಪ ಗೋರಂಟ್ಲಿ, ರಾಜಶೇಖರ ಅಂಗಡಿ, ರವೀಂದ್ರ ಬಾಕಳೆ, ಈಶಪ್ಪ ಮಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error