fbpx

ಮಕ್ಕಳ ವಿಶ್ವ ಮಟ್ಟದಲ್ಲಿ ಬೆಳೆದು ನಿಲ್ಲುವಂತ ಶಿಕ್ಷಣ ಅಗತ್ಯ-ಪಾಷಾ

ಕೊಪ್ಪಳ, ೧೮- ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆಳೆದು ನಿಲ್ಲಲು ವಿಜ್ಞಾನ ತಂತ್ರಜ್ಞಾನ ಅಗತ್ಯ ಬೇಂದ್ರ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ವಸ್ತು ಪ್ರದರ್ಶನ ಸಣ್ಣ ಮಕ್ಕಳಲ್ಲಿ ಆಗದ ಶಕ್ತಿ ಪ್ರದರ್ಶನ ಇದಾಗಿದೆ ಎಂದು ಅಜುಮನ್ ಕಮಿಟಿ ಅಧ್ಯಕ್ಷ ಎಂ. ಕಾಟನ್ ಪಾಷ ಹೇಳಿದರು.
ಅವರು ಸೋಮವಾರದಂದು ಕೊಪ್ಪಳ ತಾಲೂಕಿನ ಗಿಣಿಗೇರ ಗ್ರಾಮ ಬೇಂದ್ರ ಪಬ್ಲಿಕ್ ಸ್ಕೂಲ್‌ನಲ್ಲಿ ಜರುಗಿದ ವಿಜ್ಞಾನ ವಸ್ತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.,
ಗ್ರಾಮೀಣ ಪ್ರದೇಶದ ಮಕ್ಕಳು ಸಹ ವಿಶ್ವ ಮಟ್ಟದಲ್ಲಿ ಬೆಳೆದು ನಿಲ್ಲಲು ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳ ಸಹಕಾರಿಯಾಗಲಿದ್ದು, ಮಕ್ಕಳ ಬೌದ್ಧಿಕಮಟ್ಟ ಸುಧಾರಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚ-ಹೆಚ್ಚ ನಡೆಯಬೇಕು.
ಈ ಸಂದರ್ಭದಲ್ಲಿ ಬೇಂದ್ರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಸಂತೋಷ ದೇಶಪಾಂಡೆ, ಮಾಸ್ತಿ ಸ್ಕೂಲ್ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ, ರಮೇಶ ತುಪ್ಪದ, ಶಾಲಾ ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ರ ಇತರರು ಉಪಸ್ಥಿತರಿದ್ದರು.
ವಿಜ್ಞಾನ ವಸ್ತು ಪ್ರದರ್ಶನವನ್ನು ಸಾವಿರಾರು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Please follow and like us:
error

Leave a Reply

error: Content is protected !!