ಯುವಕರು ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಲು ಮಹೇಶಬಾಬು ಸುರ್ವೆ ಕರೆ.

ಕೊಪ್ಪಳ,ಆ.೦೮: ಇಂದಿನ ಯುವಕರಲ್ಲಿ ಸಮಯದ ಬದ್ಧತೆ, ಸಾಮಾಜಿಕ ಕಳಕಳಿ, ನಾಡಿನ ಮೇಲೆ ಗೌರವ, ಗುರು-ಹಿರಿಯರ ಬಗ್ಗೆ ಕಾಳಜಿ, ದೇಶಪ್ರೇಮವನ್ನು ರೂಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಹೇಳಿದರು. ಅವರು ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರದಂದು ಪ್ರಸಕ್ತ ೨೦೧೫-೧೬ನೇ ಸಾಲಿನ ಸಂಸತ್ ರಚನೆ, ಪ್ರಮಾಣ ವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಸಮೃದ್ಧ ಭಾರತ, ಬಲಿಷ್ಠ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಯುವಕರ ಜವಾಬ್ದಾರಿಯಿಂದ ಉದಾತ್ತವಾದ ಗುರಿಯೊಂದಿಗೆ ಸತತ ಅಧ್ಯಯನದ ಮೂಲಕ ಕಾರ್ಯಶೀಲರಾಗಿ ಕಾಲೇಜು ದಿನಗಳಲ್ಲಿಯ ವ್ಯಾಸಂಗಗಳನ್ನು ದಿಕ್ಸೂಚಿಯಾಗಿ ಮಾಡಿಕೊಂಡು ಸ್ಪಷ್ಟಗುರಿಯೊಂದಿಗೆ ಸುಗಮ ಮತ್ತು ಶಾಂತಿಯುತ, ನ್ಯಾಯಯುತ, ಪೂರ್ವಭಾವಿ ಜೀವನವನ್ನು ರೂಪಿಸಿಕೊಳ್ಳಬೇಕು. ದೇಶವನ್ನು ಮುನ್ನಡೆಸುವ ಶಕ್ತಿ ಯುವಕರಿಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ನಿರ್ಣಾಯಕ ಪಾತ್ರವಹಿಸಲು ಯುವಕರಿಗೆ ಮಹೇಶಬಾಬು ಸುರ್ವೆ ಅವರು ಕರೆ ನೀಡಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಜಿ.ಎಸ್.ಗೋ

ನಾಳ ಮಾತನಾಡುತ್ತ, ಕನ್ನಡ, ನಾಡು, ನುಡಿ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ವೈಚಾರಿಕ ಚಿಂತನೆಗಳೊಂದಿಗೆ ವೈಜ್ಞಾನಿಕವಾಗಿ ಸಮಗ್ರ ಅಭಿವೃದ್ದಿ ಕಡೆ ಗಮನಹರಿಸುವುದರ ಮೂಲಕ ನಾಡಿನ ನೆಲ, ಜಲ, ಪರಿಸರ, ಕೃಷಿಗೆ ಹೆಚ್ಚು ಒತ್ತು ಕೊಡುವ ಮೂಲಕ ಯುವ ಜನಾಂಗವು ಸಮೃದ್ಧವಾದ ನಾಡು ಕಟ್ಟಿ ಬೆಳೆಸಲು ಗುರುಗಳು ಹೇಳಿದ ಸನ್ಮಾರ್ಗದಂತೆ ಸತತವಾಗಿ ಅಭ್ಯಾಸ ಮಾಡಿದಲ್ಲಿ ನೀವು ಕೂಡ ಮುಂಬರುವ ದಿನಗಳಲ್ಲಿ ಧೀಮಂತ ವ್ಯಕ್ತಿ ಶಕ್ತಿಯಾಗಬಲ್ಲಿರಿ. ಯಾವತ್ತು ವಿದ್ಯಾರ್ಥಿಗಳು ದುಶ್ಚಟಗಳಿಂದ ಮುಕ್ತರಾಗಿದ್ದಲ್ಲಿ ಇದುವೇ ನಿಮ್ಮ ಜೀವನದ ಶ್ರೇಯಸ್ಸಿಗೆ ಮೈಲಿಗಲ್ಲಾಗಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಬಿ.ರಾಜೂರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತಿನಿಂದ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳೊಂದಿಗೆ ತೊಡಗಿಕೊಂಡರೆ ಎಲ್ಲಾ ರಂಗದಲ್ಲಿ ಯಶಸ್ಸು ಸಾಧ್ಯ ಎಂದರು. ಹಿರಿಯ ಉಪನ್ಯಾಸಕ ನಾಗರಾಜ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಜರುಗಿದವು. ಆರಂಭದಲ್ಲಿ ಶ್ರೀಮತಿ ಶೋಭಾ ಕಂಬಾಳಿಮಠ ಅವರು ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಸ್.ಬಾರಕೇರ ಸಂಸತ್ ಸದಸ್ಯರಿಗೆ ಪ್ರಮಾಣವಚನ ಬೋದಿಸಿದರು. ಉಪನ್ಯಾಸಕ ಎಸ್.ಎ.ರಜಪೂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಹುಸೇನ ಭಾಷಾ ಆರಂಭದಲ್ಲಿ ಪ್ರಾರ್ಥಿಸಿದರು. ಉಪನ್ಯಾಸಕ ಕೊಟ್ರಪ್ಪ ಎಸ್. ನೀರಲಗಿ ವಂದನಾರ್ಪಣೆ ಮಾಡಿದರೆ, ಕಾರ್ಯಕ್ರಮವನ್ನು ಉಪನ್ಯಾಸಕ ಬಸವರಾಜ ಸವಡಿ ನಿರೂಪಿಸಿದರು.

Please follow and like us:
error