fbpx

ಭಾರತೀಯ ವಾಯುಪಡೆ ಏರ್‌ಮನ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.

ಕೊಪ್ಪಳ,
ನ.೦೩ (ಕ ವಾ) ಭಾರತೀಯ ವಾಯುಪಡೆಯ ಏರ್‌ಮನ್ ಗ್ರೂಪ್-ಎಕ್ಸ್ (ತಾಂತ್ರಿಕ)
ಮತ್ತು ಗ್ರೂಪ್-ವೈ (ತಾಂತ್ರಿಕವಲ್ಲದ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ
ಆಹ್ವಾನಿಸಲಾಗಿದೆ.
     ವಾಯುಪಡೆಯ ಏರ್‌ಮನ್ ಗ್ರೂಪ್-ಎಕ್ಸ್ (ತಾಂತ್ರಿಕ) ಮತ್ತು
ಗ್ರೂಪ್-ವೈ (ತಾಂತ್ರಿಕವಲ್ಲದ) ಹುದ್ದೆಗಳಿಗೆ ೧೯೯೬ ರ ಆಗಸ್ಟ್.೦೧ ರಿಂದ ೧೯೯೯ ರ
ನವೆಂಬರ್.೩೦ ರ ಅವಧಿಯಲ್ಲಿ ಜನಿಸಿರುವ ಭಾರತೀಯ ಅವಿವಾಹಿತ ಪುರುಷ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಬಹುದಾಗಿದೆ.
     ವಿದ್ಯಾರ್ಹತೆ ವಿವರ ಇಂತಿದೆ.  ಗ್ರೂಪ್-ಎಕ್ಸ್
(ತಾಂತ್ರಿಕ) ವೃತ್ತಿಗಳಿಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ಪಿಯುಸಿ ಅಥವಾ ತತ್ಸಮಾನ
ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಆಂಗ್ಲಭಾಷೆಯಲ್ಲಿ ಸರಾಸರಿ ಕನಿಷ್ಠ ಶೇಕಡಾ
೫೦ ರಷ್ಟು ಅಂಕ ಹಾಗೂ ಆಂಗ್ಲ ಭಾಷೆಯಲ್ಲಿ ಕನಿಷ್ಠ ಶೇಕಡಾ ೫೦ ರಷ್ಟು ಅಂಕ ಗಳಿಸಿ
ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷದ ಇಂಜನೀಯರಿಂಗ್ ಡಿಪ್ಲೋಮೊವನ್ನು ಮೆಕ್ಯಾನಿಕಲ್,
ಎಲೆಕ್ಟ್ರಿಕಲ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್ ಇನ್ಸ್‌ಸಟ್ರುಮೆಂಟೇಷನ್,
ಇನ್‌ಫಾರ್ಮೆಷನ್ ಟೆಕ್ನಾಲಜಿ ವಿಷಯದಲ್ಲಿ ಸರಾಸರಿ ಕನಿಷ್ಠ ಶೇಕಡಾ ೫೦ ರಷ್ಟು
ಅಂಕಗೊಂದಿಗೆ ಪಾಸಾಗಿರಬೇಕು.  ಡಿಪ್ಲೋಮೊದಲ್ಲಿ ಆಂಗ್ಲಭಾಷೆಯ ವಿಷಯ ಇಲ್ಲದಿದ್ದಲ್ಲಿ
ಮೆಟ್ರಿಕ್ಯುಲೇಷನ್ ಅಥವಾ ಪಿ.ಯು.ಸಿ ಯಲ್ಲಿ ಆಂಗ್ಲಭಾಷೆ ವಿಷಯದಲ್ಲಿ ಶೇಕಡಾ ೫೦ ರಷ್ಟು
ಅಂಕ ಗಳಿಸಿರಬೇಕು.
     ಗ್ರೂಪ್-ವೈ (ತಾಂತ್ರಿಕವಲ್ಲದ) ವೃತ್ತಿಗಳಿಗೆ ಅರ್ಜಿ
ಸಲ್ಲಿಸಲಿಚ್ಛಿಸುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಎಜುಕೇಷನ್ ಬೋರ್ಡುಗಳಿಂದ
ಅಂಗೀಕೃತವಾದ ಸಂಸ್ಥೆಗಳಿಂದ ಯಾವುದೇ ವಿಷಯಗಳಲ್ಲಿ ಪಿ.ಯು.ಸಿ ಅಥವಾ ತತ್ಸಮಾನ
ಪರೀಕ್ಷೆಗಳನ್ನು ಸರಾಸರಿ ಶೇಕಡಾ ೫೦ ರಷ್ಟು ಅಂಕ ಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು
ಆಂಗ್ಲ ಭಾಷೆಯಲ್ಲಿ ಶೇಕಡಾ ೫೦ ರಷ್ಟು ಅಂಕ ಗಳಿಸಿರಬೇಕು ಅಥವಾ ಅಸೋಸಿಯೇಷನ್ ಆಫ್
ಇಂಡಿಯನ್ ಯೂನಿವರ್ಸಿಟಿಯಿಂದ ಅಂಗೀಕೃತವಾದ ಸಿಬಿಎಸ್‌ಇ ಅಥವಾ ಬೋರ್ಡ್ ಆಫ್ ವೆಕೇಷನಲ್
ಹೈಯರ್ ಸೆಕೆಂಡರಿ ಎಜುಕೇಷನ್ ಕೇರಳ ಇವರ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ
ಶೇಕಡಾ ೫೦ ರಷ್ಟು ಅಂಕ ಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇಕಡಾ
೫೦ ರಷ್ಟು ಅಂಕ ಗಳಿಸಿರಬೇಕು.
     ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇಮಕಾತಿ
ಆಯ್ಕೆ ಪರೀಕ್ಷೆಗಾಗಿ ತಮ್ಮ ಹೆಸರು ಮತ್ತು ವಿದ್ಯಾರ್ಹತೆಗಳನ್ನು ಆನ್‌ಲೈನ್‌ನಲ್ಲಿ
ನೊಂದಾಯಿಸಿಕೊಳ್ಳಲು ಹಾಗೂ ಅರ್ಜಿ ಭರ್ತಿ ಮಾಡುವ ವಿಧಾನ, ವಿದ್ಯಾರ್ಹತೆ, ಅರ್ಜಿ
ಕಳುಹಿಸುವ ವಿಧಾನ, ಆಯ್ಕೆ ವಿಧಾನ ಮುಂತಾದ ಮಾಹಿತಿಗಾಗಿ
ತಿತಿತಿ.ಚಿiಡಿmeಟಿseಟeಛಿಣioಟಿ.gov.iಟಿ
ವೆಬ್‌ಸೈಟ್‌ಗೆ
ನವೆಂಬರ್.೦೮ ರಿಂದ ನವೆಂಬರ್.೨೮ ರೊಳಗಾಗಿ ಭೇಟಿ ನೀಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ
ಹಾಗೂ ಪೂರ್ಣ ಮಾಹಿತಿಯನ್ನು ನವೆಂಬರ್.೦೭ ರ ಎಪ್ಲಾಯ್‌ಮೆಂಟ್ ನ್ಯೂಸ್ ವಾರಪತ್ರಿಕೆಯಲ್ಲಿ
ಬರಲಿರುವ ಜಾಹೀರಾತಿನಿಂದ ಅಥವಾ ೭ ಏರ್‌ಮನ್ ಸೆಲೆಕ್ಷನ್ ಸೆಂಟರ್, ನಂ.೦೧, ಕಬ್ಬನ್
ರಸ್ತೆ, ಬೆಂಗಳೂರು-೫೬೦೦೦೧ ಇವರನ್ನು  ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೨
ಗಂಟೆಯೊಳಗಾಗಿ ದೂರವಾಣಿ ಸಂಖ್ಯೆ : ೦೮೦-೨೫೫೯೨೧೯೯ ಮೂಲಕ ಸಂಪರ್ಕಿಸಿ ಪಡೆಯಬಹುದಾಗಿದೆ
ಎಂದು ಪ್ರಕಟಣೆ ತಿಳಿಸಿದೆ.
ನೇಮಕಾತಿ ಪರೀಕ್ಷೆಗಳಿಗೆ ತರಬೇತಿ.
ಕೊಪ್ಪಳ ನ. ೦೩
(ಕ ವಾ) ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯದ `ಕರಾಮುವಿ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ದೇಶದ ವಿವಿಧ ರಾಷ್ಟ್ರೀಕೃತ
ಬ್ಯಾಂಕ್ (ಐ.ಬಿ.ಪಿ.ಎಸ್) ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ
ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಿದೆ.
    
ಇದು ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್(ಎಸ್.ಎಸ್.ಸಿ), ಎಲ್.ಐ.ಸಿ, ನ್ಯಾಷನಲ್
ಇನ್ಸುರೆನ್ಸ್, ಆರ್.ಬಿ.ಐ. ಆರ್.ಆರ್.ಬಿ ವಿಭಾಗದವರು ನಡೆಸುವ ಆಯ್ಕೆ ಸ್ಪರ್ಧಾತ್ಮಕ
ಪರೀಕ್ಷೆಗಳಿಗೂ ಅನುಕೂಲವಾಗುತ್ತದೆ. ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‌ಗಳವರು
೨೦೧೫-೧೬ನೇ ಸಾಲಿನಲ್ಲಿ ೫೦ ಸಾವಿರಕ್ಕೂ ಹೆಚ್ಚು ಅಧಿಕಾರಿಗಳ ಹಾಗೂ ಗುಮಾಸ್ತರ
ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. 
ಆಸಕ್ತರು ದಿನಾಂಕ: ೧೩.೧೧.೨೦೧೫ ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ
ಆವರಣದಲ್ಲಿರುವ `ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಚೇರಿಯಲ್ಲಿ
ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ತಮ್ಮ ಹೆಸರನ್ನು 
ನೋಂದಾಯಿಸಿಕೊಳ್ಳಬಹುದೆಂದು ‘ಕರಾಮುವಿ ಸ್ಪರ್ಧಾತ್ಮಕ  ಪರೀಕ್ಷಾ ತರಬೇತಿ ಕೇಂದ್ರ’ದ
ಸಂಯೋಜನಾಧಿಕಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ವಿವರಗಳಿಗೆ
ದೂರವಾಣಿ ಸಂಖ್ಯೆ: ೦೮೨೧-೨೫೧೫೯೪೪  ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ತಾಯಿ ಹಾಗೂ ಶಿಶು ಮರಣ ಹೆಚ್ಚಳಕ್ಕೆ ಬಾಲ್ಯ ವಿವಾಹ ಕಾರಣ ಶೇಖರಗೌಡ ಜಿ. ರಾಮತ್ನಾಳ.

ಕೊಪ್ಪಳ,
ನ.೦೩ (ಕ ವಾ) ಜಿಲ್ಲೆಯಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ, ಗರ್ಭಿಣಿ
ತಾಯಂದಿರಲ್ಲಿ ರಕ್ತ ಹೀನತೆ, ಅಪೌಷ್ಠಿಕ ಮಕ್ಕಳ ಜನನಕ್ಕೆ ಬಾಲ್ಯ ವಿವಾಹವು ಮುಖ್ಯ
ಕಾರಣವಾಗಿದೆ ಎಂದು ಕೊಪ್ಪಳದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ.ರಾಮತ್ನಾಳ
ಹೇಳಿದರು.
     ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ
ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಯಲಬುರ್ಗಾ ತಾಲೂಕಿನ
ಮುರಡಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅ.೩೧ ರಂದು ಆಯೋಜಿಸಲಾಗಿದ್ದ
ಜನಸಂಪರ್ಕ ಸಂವಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
     ಭಾರತ ಸರ್ಕಾರವು
ತಾಯಿ ಹಾಗೂ ಶಿಶು ಮರಣ ಪ್ರಮಾಣ, ಗರ್ಭಿಣಿ ತಾಯಂದಿರಲ್ಲಿ ರಕ್ತ ಹಿನ್ನತೆ, ಅಪೌಷ್ಠಿಕ
ಮಕ್ಕಳ ಜನನ ಸೇರಿದಂತೆ ಇತ್ಯಾದಿ ಅಂಶಗಳನ್ನು ಮನಗಂಡು ಬಾಲ್ಯ ವಿವಾಹ ನಿಷೇಧ
ಕಾಯ್ದೆ-೨೦೦೫ ನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿಯಲ್ಲಿ ೧೮ ವರ್ಷದೊಳಗಿನ ಹೆಣ್ಣು
ಮಕ್ಕಳಿಗೆ ಹಾಗೂ ೨೧ ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಕಾನೂನು
ಬಾಹಿರವಾಗಿದೆ. ಒಂದು ವೇಳೆ ಅಂತಹ ಅಪ್ರಾಪ್ತರಿಗೆ ಮದುವೆ ಮಾಡಿದ್ದೆ ಆದಲ್ಲಿ, ಮದುವೆ 
ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರಿಗೆ ಎರಡು ವರ್ಷದ ಜೈಲು ಶಿಕ್ಷೆ ಅಥವಾ
ಒಂದು ವರ್ಷ ಸೆರೆವಾಸ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೂ
ಬಾಲ್ಯ ವಿವಾಹ ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರ ವಿರುದ್ಧ ಎಂಟು ಬಾಲ್ಯ
ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದ್ದರಿಂದ ಯಾರೂ ಕೂಡ ಜಿಲ್ಲೆಯ ಬಾಲ್ಯ
ವಿವಾಹಗಳನ್ನು ಮಾಡಬೇಡಿ ಎಂದ ಅವರು, ಅಲ್ಲದೆ, ಸಂಕಷ್ಠದಲ್ಲಿರುವ ಮಕ್ಕಳ ಸಹಾಯಕ್ಕಾಗಿ
ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ತಮ್ಮ ಸುತ್ತಮುತ್ತಲೂ ಅಂತಹ
ಮಕ್ಕಳು ಕಂಡುಬಂದಲ್ಲಿ ಕೂಡಲೇ ೧೦೯೮ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ನೀಡುವಂತೆ
ಸಾರ್ವಜನಿಕರಲ್ಲಿ ಮನವಿ ಮಾಡಿದರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಆಗಮಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಆರೈಕೆ
ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು
ಪೋಷಣೆಗಾಗಿ ಮಕ್ಕಳನ್ನು ಈ ಮಕ್ಕಳ ವಿಶೇಷ ಪೊಲೀಸ್ ರಕ್ಷಣಾ ಘಟಕಕ್ಕೆ
ಹಾಜರಪಡಿಸಬಹುದಾಗಿದೆ. ಬಳಿಕ ಹಾಜರುಪಡಿಸಲಾದ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ
ವತಿಯಿಂದ ಸೂಕ್ತ ಪುರ್ನವಸತಿ  ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
    
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯಾದ ರವಿಕುಮಾರ ಪವಾರ ಮಾತನಾಡಿ, ಮಕ್ಕಳ
ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ ಮಕ್ಕಳ
ರಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಬಾಧಿತ
ಹಾಗೂ ಸೋಂಕಿತ ಮಕ್ಕಳಿಗೆ ಆರೈಕೆ ಮತ್ತು ಪೋಷಣೆಗಾಗಿ ವಿಶೇಷ ಪಾಲನಾ ಯೋಜನೆಯಡಿ ಪ್ರತಿ
ಮಾಹೆ ೬೫೦ ರೂ.ನಂತೆ ಮತ್ತು ಮಗು ಶಾಲೆಗೆ ತೆರಳುತ್ತಿದ್ದಲ್ಲಿ ಶೈಕ್ಷಣಿಕ ವೆಚ್ಚವಾಗಿ
೫೦೦ ರೂ.ಗಳ ವಾರ್ಷಿಕವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ತೀವ್ರ
ಸಂಕಷ್ಠದಲ್ಲಿರುವ ಅನಾಥ, ಏಕಪೋಷಕ ಮಕ್ಕಳ ಆರೈಕೆ ಮತ್ತು ಪೋಷಣೆಗಾಗಿ ಹಾಗೂ ಶೈಕ್ಷಣಿಕ
ವೆಚ್ಚಕ್ಕಾಗಿ ಪ್ರಾಯೋಜಕತ್ವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಇದರ
ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
     ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ
ಸಿಬ್ಬಂದಿ ಎಸ್.ಆರ್.ಮಠದ, ಮಕ್ಕಳ ಸಹಾಯವಾಣಿಯ ಜಾರ್ಜ ಪಟ್ಟದಕಲ್ಲ, ಮುರಡಿ ಗ್ರಾಮ
ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಹಡಪದ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ
ಜತ್ತಿ 
ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
 
 ನ. ೦೬ ರಂದು ಗಂಗಾವತಿಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಕಾರ್ಯಗಾರ.
ಕೊಪ್ಪಳ
ನ. ೦೩ (ಕ ವಾ) ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ಸರ್ಕಾರಿ,
ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ
ವಿಶ್ಲೇಷಣೆ ಕುರಿತು ಕಾರ್ಯಗಾರವನ್ನು ನ. ೦೬ ರಂದು ಬೆಳಿಗ್ಗೆ ೧೦ ಗಂಟೆಗೆ ಗಂಗಾವತಿಯ
ಜುಲಾಯಿ ನಗರದಲ್ಲಿನ ಜನತಾ ಸೇವಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದೆ.
     ಹತ್ತನೆ
ತರಗತಿಯ ಮೊದಲನೆ ಸಂಕಲನಾತ್ಮಕ ಮೌಲ್ಯಮಾಪನ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರದಲ್ಲಿ
ನಡೆಯಲಿದೆ.  ಈ ಕಾರ್ಯಗಾರಕ್ಕೆ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ
ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಆಯಾ ಶಾಲೆಯ ಮೊದಲನೆ ಸಂಕಲನಾತ್ಮಕ ಮೌಲ್ಯಮಾಪನ ಫಲಿತಾಂಶ
ಹಾಗೂ ಶೇ. ೩೫ ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯೊಂದಿಗೆ ಕಡ್ಡಾಯವಾಗಿ
ಹಾಜರಾಗುವಂತೆ ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

ಸಹ ಶಿಕ್ಷಕರ ನೇಮಕಾತಿ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಪ್ರಕಟ.
ಕೊಪ್ಪಳ,
ನ.೦೩ (ಕ ವಾ) ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ,
ಕೊಪ್ಪಳ ಇವರಿಂದ ೨೦೦೯ನೇ ಸಾಲಿನಲ್ಲಿ ಬಾಕಿ ಉಳಿದಿರುವ ಸರ್ಕಾರಿ ಪ್ರಾಥಮಿಕ
ಶಾಲೆಗಳಲ್ಲಿನ ಸಹ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಅಂಧ, ಮಂದದೃಷ್ಠಿಯ
ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಹುದ್ದೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಹಾಗೂ ಅಂತಿಮ
ಆಯ್ಕೆಪಟ್ಟಿಯನ್ನು ಅ.೨೯ ರಂದು ಪ್ರಕಟಿಸಲಾಗಿದೆ.
     ಅಂಧ, ಮಂದದೃಷ್ಠಿಯ
ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಆ.೧೯ ರಂದು
ಅಂತಿಮ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪಟ್ಟಿಯನ್ನು
ನಿಯಮಗಳನ್ವಯ ಮತ್ತೊಮ್ಮೆ ಪರಿಶೀಲಿಸಿ, ಅ.೨೯ ರಂದು ಪರಿಷ್ಕೃತ ಹಾಗೂ ಅಂತಿಮ ಆಯ್ಕೆ
ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ
ಉಪನಿರ್ದೇಶಕರ ಕಛೇರಿ ಮತ್ತು ಜಿಲ್ಲೆಯ ನಾಲ್ಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ
ಸೂಚನಾ ಫಲಕದಲ್ಲಿ ನೋಡಬಹುದಾಗಿದೆ. ಈ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ
ಮೂಲ ದಾಖಲೆಗಳು ಮತ್ತು ಧೃಢೀಕೃತ ನಕಲು ಪ್ರತಿಗಳೊಂದಿಗೆ ನ.೦೬ ರಂದು ಬೆಳಿಗ್ಗೆ ೧೦
ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳದಲ್ಲಿ
ಏರ್ಪಡಿಸಲಾಗಿರುವ ದಾಖಲೆಗಳ ಪರಿಶೀಲನೆ ಮತ್ತು ಕೌನ್ಸೆಲಿಂಗ್‌ಗೆ ಹಾಜರಾಗುವಂತೆ ಇಲಾಖೆಯ
ಉಪನಿರ್ದೇಶಕರು ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!