ಮಣ್ಣು ಆರೋಗ್ಯ ಅಭಿಯಾನ ಯೋಜನೆ ಯಶಸ್ವಿಗೆ ರೈತರು ಸಹಕರಿಸಿ- ಎಂ. ಕನಗವಲ್ಲಿ ಮನವಿ.

ಕೊಪ್ಪಳ, ಡಿ.೦೨ (ಕ ವಾ) ರೈತರು ತಮ್ಮ ಜಮೀನಿನ ಮಣ್ಣಿನ ಫಲವತ್ತತೆಯ ಬಗ್ಗೆ ಸಮಗ್ರ ಅರಿವು ಹೊಂದುವಂತಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಯೋಜನೆಯ ಯಶಸ್ವಿಗೆ ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
     ಮಣ್ಣು ಆರೋಗ್ಯ ಅಭಿಯಾನ ಯೋಜನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ತೀವ್ರತರವಾದ ಕೃಷಿ ಪದ್ಧತಿಗಳು ಹಾಗೂ ಪರಿಸರದ ವೈಪರಿತ್ಯಗಳಿಂದಾಗಿ ಮಣ್ಣು ನಿರಂತರವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ.  ಕೃಷಿ ಉತ್ಪಾದಕತೆಯು ಮಣ್ಣು ಮತ್ತು ನೀರಿನ ಗುಣಮಟ್ಟ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಅವಲಂಬಿಸಿದ್ದು, ಕೃಷಿ ಬೆಳವಣಿಗೆಗೆ ನಿರ್ದಿಷ್ಟ ಕ್ರಮಗಳ ಮೂಲಕ ವಿರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಮಣ್ಣಿನ ಘಟಕಗಳಾದ ಖನಿಜ, ಸಾವಯವ ವಸ್ತು, ನೀರು ಮತ್ತು ಗಾಳಿ ಇವುಗಳಿಂದ ಸಸ್ಯದ ಬೆಳವಣಿಗೆಯನ್ನು ರೂಪಿಸಬಹುದಾಗಿದೆ.  ಮಣ್ಣಿನಲ್ಲಿ ಸದ್ಯ ಇರುವ ಪೋಷಕಾಂಶಗಳ ವಿಶ್ಲೇಷಣೆ ಮಾಡಿ, ಬೆಳೆವಾರು, ಆ ಮಣ್ಣಿಗೆ ನೀಡಬೇಕಾದ ಪೋಷಕಾಂಶಗಳ ಕುರಿತು ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡುವಂತಾಗಲು ಮಣ್ಣು ಆರೋಗ್ಯ ಅಭಿಯಾನ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ.  ಯೋಜನೆಯಡಿ ಎರಡು ವರ್ಷದೊಳಗೆ ಜಿಲ್ಲೆಯಲ್ಲಿ ಇರುವ ಎಲ್ಲ ೨. ೧೮ ಲಕ್ಷ ರೈತ ಹಿಡುವಳಿದಾರರಿಗೆ ಅವರ ಜಮೀನಿನ ಮಣ್ಣು ಆರೋಗ್ಯ ಚೀಟಿಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ.  ರೈತರ ಶ್ರೇಯೋಭಿವೃದ್ಧಿಗಾಗಿ ಈ ಅಭಿಯಾನ ಅತ್ಯಂತ ಅರ್ಥಪೂರ್ಣವಾಗಿದ್ದು, ಅಭಿಯಾನದ ಯಶಸ್ವಿಗೆ ಜಿಲ್ಲಾ, ತಾಲೂಕು ಮಟ್ಟದ ಕೃಷಿ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು.  ಪ್ರತಿ ಹೋಬಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಮಣ್ಣು ಮಾದರಿ ಸಂಗ್ರಹ, ಪ್ರಯೋಗಾಲಯದಲ್ಲಿ ವಿಶ್ಲೇಷಣೆ ಹಾಗೂ ನಂತರದಲ್ಲಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆಯಾಗುವವರೆಗೂ ನಿಗಾ ವಹಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕು. ರೈತರಿಗೆ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ಹಮ್ಮಿಕೊಳ್ಳಬೇಕು. ರೈತರೂ ಸಹ ಕೃಷಿ ಇಲಾಖೆ ಸಿಬ್ಬಂದಿಗಳು ಜಮೀನಿನಲ್ಲಿ ಮಣ್ಣು ಮಾದರಿ ಸಂಗ್ರಹಕ್ಕೆ ಬಂದಾಗ ಅವರೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಮನವಿ ಮಾಡಿದರು.
     ಮಣ್ಣು ಆರೋಗ್ಯ ಅಭಿಯಾನ ಯೋಜನೆಯ ಬಗ್ಗೆ ಸಭೆಯಲ್ಲಿ ಸಮಗ್ರ ವಿವರ ನೀಡಿದ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು, ಜಿಲ್ಲೆಯಲ್ಲಿ ೨೧೮೧೦೨ ರೈತ ಹಿಡುವಳಿದಾರರಿದ್ದು, ಇದರಲ್ಲಿ ಶೇ. ೬೫ ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದರೆ, ಶೇ. ೩೫ ರಷ್ಟು ಇತರೆ ರೈತರಿದ್ದಾರೆ.  ಪ್ರತಿಯೊಬ್ಬ ರೈತರೂ, ತಮ್ಮ ಜಮೀನಿಗೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರಗಳನ್ನು ಶಿಫಾರಸ್ಸು ಮಾಡಿ, ಮಣ್ಣಿನ ಫಲವತ್ತತೆ ಕಾಪಾಡುವುದು.  ಉತ್ಪಾದನಾ ವೆಚ್ಚ ತಗ್ಗಿಸಿ ಉತ್ಪಾದಕತೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.  ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡ ಆಧರಿಸಿ, ರೈತರ ಜಮೀನಿನಲ್ಲಿ ಖುಷ್ಕಿ ಪ್ರದೇಶದಲ್ಲಿ ಪ್ರತಿ ೧೦ ಹೆಕ್ಟೇರ್‌ಗೆ ಒಂದು ಗ್ರಿಡ್ ನಂತೆ ಹಾಗೂ ನೀರಾವರಿ ಪ್ರದೇಶದಲ್ಲಿ ೨. ೫ ಹೆ.ಗೆ ಒಂದು ಗ್ರಿಡ್‌ನಂತೆ ಮಣ್ಣು ಮಾದರಿಯನ್ನು ಪ್ರತಿ ಗ್ರಿಡ್‌ನ ನಾಲ್ಕೂ ಮೂಲೆ ಹಾಗೂ ಕೇಂದ್ರ ಬಿಂದುವಿನಲ್ಲಿ ಜಿಪಿಎಸ್ ಹಾಗೂ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಮಣ್ಣು ಸಂಗ್ರಹಿಸಿ, ಕ್ವಾರ್ಟರಿಂಗ್ ಮಾದರಿಯಲ್ಲಿ ಒಂದು ಮಣ್ಣು ಮಾದರಿ ತಯಾರಿಸಲಾಗುವುದು.  ಗಂಗಾವತಿಯಲ್ಲಿನ ಇಲಾಖೆಯ ಮಣ್ಣು ಪ್ರಯೋಗಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಪ್ರಯೋಗಾಲಯದಲ್ಲಿ ಪರೀಕ್ಷೆ ಕೈಗೊಂಡು, ಗಣಕೀಕೃತ ವ್ಯವಸ್ಥೆಯಲ್ಲಿ ಭೂಮಿ ಯೋಜನೆಯಲ್ಲಿನ ಡೇಟಾ ಬೇಸ್‌ನಲ್ಲಿರುವ ಸಂಬಂಧಪಟ್ಟ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಗುವುದು.  ಈ ರೀತಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಆರೋಗ್ಯ ಚೀಟಿ ವಿತರಣೆ ನಡೆಯಲಿದೆ.   ಮೊದಲನೆ ವರ್ಷದಲ್ಲಿ ಕೊಪ್ಪಳ ತಾಲೂಕಿನ ಇರಕಲ್ಲಗಡ ಮತ್ತು ಹಿಟ್ನಾಳ ಹೋಬಳಿಯ ಒಟ್ಟು ೬೧ ಗ್ರಾಮಗಳು, ಕುಷ್ಟಗಿ ತಾಲೂಕಿನ ಹನಮನಾಳ ಮತ್
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಡಾ. ವಿಶ್ವನಾಥ್ ಸೇರಿದಂತೆ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತು ತಾವರಗೇರಾ ಹೋಬಳಿಯ ಒಟ್ಟು ೭೯ ಗ್ರಾಮಗಳು. ಯಲಬುರ್ಗಾ ತಾಲೂಕಿನ ಹಿ.ವಂಕಲಕುಂಟ ಮತ್ತು ಮಂಗಳೂರು ಹೋಬಳಿಗಳ ೬೯ ಗ್ರಾಮಗಳು ಹಾಗೂ ಗಂಗಾವತಿ ತಾಲೂಕಿನ ಕನಕಗಿರಿ, ಹುಲಿಹೈದರ, ವೆಂಕಟಗಿರಿ ಮತ್ತು ಮರಳಿ ಹೋಬಳಿಗಳ ಒಟ್ಟು ೮೩ ಗ್ರಾಮಗಳು ಸೇರಿದಂತೆ ಒಟ್ಟಾರೆ ೨೯೨ ಗ್ರಾಮಗಳ ೩೩೬೪೪ ಗ್ರಿಡ್ ಮಣ್ಣು ಮಾದರಿ ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ, ಮಣ್ಣು ಆರೋಗ್ಯ ಚೀಟಿ ವಿತರಿಸಲಾಗುವುದು ಹಾಗೂ ಎರಡನೆ ವರ್ಷದಲ್ಲಿ ಉಳಿದ ಹೋಬಳಿ ವ್ಯಾಪ್ತಿಯ ಗ್ರಾಮಗಳ ೪೦೬೪೮ ಗ್ರಿಡ್‌ನಂತೆ ಎರಡು ವರ್ಷಗಳಲ್ಲಿ ಒಟ್ಟು ೭೪೨೯೨ ಗ್ರಿಡ್‌ಗಳ ಮಣ್ಣು ಮಾದರಿ ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ, ಮಣ್ಣು ಆರೋಗ್ಯ ಚೀಟಿ ವಿತರಿಸಲಾಗುವುದು.  ಇದಕ್ಕಾಗಿ ಅಗತ್ಯವಿರುವ ಸಿಬ್ಬಂದಿಗಳನ್ನು ಹೊರಗುತ್ತಿಗೆ ಏಜೆನ್ಸಿಗಳಿಂದ ಟೆಂಡರ್ ಮೂಲಕ ನೇಮಕ ಮಾಡಲಾಗುತ್ತಿದೆ ಎಂದರು.

Please follow and like us:
error