೬ ಮತ್ತು ೭ ರಂದು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ.

ಕೊಪ್ಪಳ-03- ಶ್ರೀಗವಿಸಿದ್ಧೇಶ್ವರ ಜಾತ್ರಾ ಅಂಗವಾಗಿ ಜರುಗುತ್ತಿರುವ ಉದ್ಯೋಗ ಮೇಳದಲ್ಲಿ ಹೆಸರನ್ನು ನೊಂದಣಿ ಮಾಡಿಸಿ ಕೌಶಲ್ಯ ತರಬೇತಿಯನ್ನು ಪಡೆದಿರುವ ಉದ್ಯೋಗದ ಆಕಾಂಕ್ಷಿಗಳು ಇದೇ ದಿನಾಂಕ ೦೬-೦೨-೨೦೧೬ ಹಾಗೂ ೦೭-೦೨-೨೦೧೬ ರಂದು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ  ನೆಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕು.
ಉದ್ಯೋಗದ ಆಕಾಂಕ್ಷಿಗಳಿಗೆ ಸೂಚನೆ: ಎರಡು ದಿವಸಗಳ ಕಾಲ ಜರುಗಲಿರುವ ಉದ್ಯೋಗ ಮೇಳದಲ್ಲಿ ದಿನಾಂಕ ೦೬-೦೨-೨೦೧೬ ರಂದು ನೊಂದಣಿ ಸಂಖ್ಯೆ ೧ ರಿಂದ ೧೦೦೦ ವರೆಗೆ ಮುಂಜಾನೆ ೯ ಗಂಟೆಗೆ, ನೊಂದಣಿ ಸಂಖ್ಯೆ ೧೦೦೧ ರಿಂದ ೨೦೦೦ ವರೆಗೆ ಮುಂಜಾನೆ ೧೧ ಗಂಟೆಗೆ ಹಾಗೂ ನೊಂದಣಿ ಸಂಖ್ಯೆ ೨೦೦೧ ರಿಂದ ೩೦೦೦ ವರೆಗೆ  ಮಧ್ಯಾಹ್ನ ೧ ಗಂಟೆಗೆ ಸಂದರ್ಶನ ನೆಡೆಸಲಾಗುವದು. ಹಾಗೆಯೇ ದಿನಾಂಕ ೦೭-೦೨-೨೦೧೬ ರಂದು ನೊಂದಣಿ ಸಂಖ್ಯೆ ೩೦೦೧ ರಿಂದ ೪೦೦೦ ವರೆಗೆ ಮುಂಜಾನೆ ೯ ಗಂಟೆಗೆ ಹಾಗೂ  ನೊಂದಣಿ ಸಂಖ್ಯೆ ೪೦೦೧ ರಿಂದ ೫೦೦೦ ವರೆಗೆ ೧೧ ಗಂಟೆಗೆ ಸಂದರ್ಶನ ನೆಡೆಸಲಾಗುವದು. ಉದ್ಯೋಗಮೇಳದಲ್ಲಿ ೪೫ ಪ್ರತಿಷ್ಟಿತ ಕಂಪನಿಗಳು ಭಾಗವಹಿಸುತ್ತಲಿವೆ. ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರವನ್ನು ನೀಡಲಾಗುತ್ತದೆ.ಎಲ್ಲ ಅಭ್ಯರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೊಳ್ಳ ಬೇಕೆಂದು ಶ್ರೀಗವಿಮಠದ ತಿಳಿಸಿದೆ.
Please follow and like us:
error