ಯುಪಿಎಸ್ ಇನ್ವರ್ಟರ್ ಅಂಗಡಿ ಕಳ್ಳತನ

ನಗರದ ನಗರಸಭೆ ಪಕ್ಕದ ನಗರಸಭೆ ಮಳಿಗೆಯ ಗೋವಿಂದ ಎಂಟರ್ ಪ್ರೈಜಸ್ ನ ಅಂಗಡಿಯಲ್ಲಿ ಕಳ್ಳತನವಾಗಿದೆ. ರಾತ್ರಿ ಸಿಸಿಟಿವಿ ಕ್ಯಾಮರಾ ವೈರ್ ಗಳನ್ನು ಕತ್ತರಿಸಿ ಅಂಗಡಿಯಲ್ಲಿಟ್ಟಿದ್ದ ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಯುಪಿಎಸ್ ಮತ್ತು ಇನ್ವರ್ಟಗಳನ್ನು ಕಳುವು ಮಾಡಲಾಗಿದೆ. ಬೆಳಿಗ್ಗೆ ಬಂದು ನೋಡಿದಾಗಲೇ ಗೊತ್ತಾಗಿದೆ ಎಂದು ಅಂಗಡಿಯ ಪ್ರವೀಣ ಲದ್ವಾ ಹೇಳಿದರು.  
ಶಟರ್ಸ್  ಹಾಕಲಾಗಿದ್ದ ಕೀಲಿಯನ್ನು ತೆಗೆದು ಲಾಕ್ ನ್ನು ಕತ್ತರಿಸಲಾಗಿದೆ. ಅಲ್ಲದೇ ಸಿಸಿಟಿವಿ ಕ್ಯಾಮರಾ ವೈರನ್ನು ಕತ್ತರಿಸಿ ಈ ದುಷ್ಕೃತ್ಯ ಮಾಡಲಾಗಿದೆ 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿವೆ  ಎಂದು ಪ್ರವೀಣ ಅಳಲನ್ನು ತೋಡಿಕೊಂಡರು. 

Leave a Reply