ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಜೂನ್ ೨೬-೨೦೧೩-೧೪ 
       ದಿ ೨೬- ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ಜಿಲ್ಲೆ ಭಾಗ್ಯ ನಗರದ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಇವರಿಂದ ಆಚರಿಸಲಾಯಿತು. 
       ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಿ. ದೊರೆಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ವ್ಯಕ್ತಿ ಯೋಬ್ಬ ಮಾದಕ ವ್ಯಸನಿಯಾದರೆ, ಆತನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷಿಣಿಸುವುದಲ್ಲದೆ ಆvನನ್ನು ನಂಬಿಕೊಂಡ ಸಂಸಾರದ ಬದುಕು ಹಾಳಾಗುತ್ತದೆ. ಆದ್ದರಿಂದ ಮಾದಕ ಸೇವನೆ ಹಾಗೂ ಬಳಕೆಗೆ ವಿರುದ್ಧ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ವೈದ್ಯರಾ ಡಾ. ರಾಘವೇಂದ್ರ ಕೆ. ಬಿ. ಕರೆನೀಡಿದರು. 
        ಅವರು ಬುಧವಾರ ೨೬-೦೬-೨೦೧೩ ರಂದು ಭಾಗ್ಯ ನಗರ ಸರಕಾರಿ ಶಾಲೆಯಲ್ಲಿ  ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಕೊಪ್ಪಳ ಇವರ ಪ್ರಾಯೋಜಕತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಹಾಗೂ ನಾಗರಿಕರು ಎಚ್ಚರವಹಿಸಬೇಕು. ಮಕ್ಕಳ ತಂದೆ ತಾಯಿಗಳ ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡಬಾರದು ಎಂದು ಹೇಳಿದರು.
       ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಬಕಾರಿ ಹಾಗೂ ಲ್ಯಾಟರಿ ಪೋಲೀಸ್ ಇಲಾಖೆಯ ಪೋಲೀಸ್ ಇನಸ್ಪೆಕ್ಟರ್ ಶ್ರೀ ಶೈಲ್ ಮಠಪತಿ ಮಾತನಾಡಿ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಜಗತ್ತಿನಲ್ಲಿ ಒಂದು ಪಿಡುಗಾಗಿ ಪರಿಣಮಿಸಿದೆ. ಇದನ್ನು ಹೋಗಳಾಡಿಸುವದು ಒಂದು ಸವಾಲಾಗಿದೆ. ಕಾನೂನಿನಲ್ಲಿ ಮಾದಕ ವಸ್ತುಗಳ ನರ್ಮೂಲನ ಕಾಯ್ದೆಯ ಮೂಲಕ ಇದನ್ನು ಪರಿಣಾಮವಾಗಿ ನಿರ್ಮೂಲನೆ ಮಾಡಲು ಅವಕಾಶ ಇದೆ ಎಂದು ತಿಳಿಸಿದರು.
        ಮುಖ್ಯ ಅತಿಥಿಯಾಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಯಂಕಪ್ಪ, ಸುರಭಿ ಕೇಂದ್ರದ ವೈದ್ಯಾಧಿಕಾರಿ ಡಾ. ರವೀಂದ್ರ ಸುರಭಿ ಯೋಜನಾ ನಿರ್ದೇಶಕರಾದ ಪ್ರವೀಣ ವಿ. ಜಂಗಲ್ ಹಾಗೂ ಸುರಭಿ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
        ಜಾಫರ ಮಿರ್ಜಾ ನಿರೂಪಿಸಿದರು. ಶಿವಾನಂದಯ್ಯ ಹೀರೆಮಠ ಸ್ವಾಗತಿಸಿದರು. ವಂದನಾರ್ಪಣೆಯ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಬಿಧಿ ಬಿಧಿಯಲ್ಲಿ ಕೊಪ್ಪಳ ನಗರದಲ್ಲೆಲ್ಲಾ ಮಕ್ಕಳಿಂದ ಬೃಹತ್ ಜನಜಾಗೃತಿ ಜಾತಾ ಹಾಗೂ ಘೋಷಣೆಗಳು ಕೇಳಿ ಬಂದವು. ನಂತರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
Please follow and like us:
error