ಡಿ.೧೦ ರಿಂದ ಜಿಲ್ಲೆಯಲ್ಲಿ ಮಕ್ಕಳ ಗಣತಿ : ನಿಖರ ಮಾಹಿತಿ ನೀಡಲು ಮನವಿ

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಸಲುವಾಗಿ ಡಿ. ೧೦ ರಿಂದ ೧೫ ರವರೆಗೆ ಜಿಲ್ಲೆಯಾದ್ಯಂತ ಮಕ್ಕಳ ಗಣತಿ ಕಾರ್ಯ ನಡೆಯಲಿದೆ.
     ಶಾಲೆಯಿಂದ ಹೊರಗುಳಿದ ಮಕ್ಕಳ (ಓ.ಓ.ಎಸ್.ಸಿ.ಮಕ್ಕಳ ಚೈಲ್ಡ್‌ಟ್ರ್ಯಾಕ್ಟ್‌ಗೆ) ಗಣತಿ ಮಾಡುವ ಸಂಬಂಧ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯ ಎಲ್ಲಾ ಜನವಸತಿ ಪ್ರದೇಶದಲ್ಲಿ ಸರ್ವೆ ಕಾರ್ಯವು ಡಿ.೧೦ ರಿಂದ ಡಿ.೧೫ ರವರೆಗೆ ನಡೆಯಲಿದೆ ಎಂದು ಸರ್ವ ಶಿಕ್ಷಣ ಅಭಿಯಾನದ  ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು  ತಿಳಿಸಿದ್ದಾರೆ. ಈ ಕಾರ್ಯಕ್ಕೆ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಿ ಶಾಲೆಬಿಟ್ಟ ಮಕ್ಕಳ ನಿಖರ ಮಾಹಿತಿಯನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ.

Leave a Reply