ಬಸವ ಮಂಟಪದಲ್ಲಿ ಧ್ವಜಾರೋಹಣ

 ರಾಷ್ಟ್ರೀಯ ಬಸವದಳ ಟ್ರಸ್ಟ್ (ರಿ) ಹಾಗೂ ಲಿಂಗಾಯತ ದರ್ಮ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಬಸವ ಮಂಟಪದಲ್ಲಿ ೬೭ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು.  ಧ್ವಜಾರೋಹಣವನ್ನು ಕರ್ನಾಟಕ ರಾಜ್ಯ ರಾಷ್ಟ್ರೀಯ ಬಸವದಳ ರಾಜ್ಯ ಘಟಕದ ಅಧ್ಯಕ್ಷರಾದ ಶರಣ ಕೆ.ವೀರಣ್ಣ ಲಿಂಗಾಯತ ಇವರು ನೆರವೆರಿಸಿದರು.
ಈ ಸಂದರ್ಬದಲ್ಲಿ ಉಪಸ್ಥಿತರಿದ್ದ ಶರಣ ಚಂದ್ರಮೌಳಿ.ಆರ್.ವೈ, ಮಾತನಾಡುತ್ತಾ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾದಾಗ ಮಾತ್ರ ಸ್ವಾತಂತ್ರ್ಯದ ಮಹತ್ವ ಹೆಚ್ಚುತ್ತದೆ ಈ ನಿಟ್ಟಿನಲ್ಲಿ ಬಸವಾದಿ ಪ್ರಮಥರು ಭೋಧಿಸಿದ ಸುಲಭ ಹಾಗೂ ಸರಳ ಜೀವನ ಸಂದೇಶವನ್ನು ನಾವೆಲ್ಲರು. ಅಳವಡಿಸಕೊಳ್ಳಬೇಕು ಎಂದರು. ಸ್ವತಂತ್ರ್ಯ ಚಳುವಳಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡ ಸರ್ವ ಮಹಾನುಭಾವರನ್ನು ನಾವು ದಿನ ನಿತ್ಯ ನೆನಯಬೇಕು ಎಂದರು.
ಇದೇ ರೀತಿ ಕೊಪ್ಪಳ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷರಾದ ಶರಣ ಸುಂಕಪ್ಪನವರು ಅಮರಾಪೂರ ಕೇವಲ ಮಸಾಲೆ ವ್ಯಾಪರಕ್ಕಾಗಿ  ಬಂದ ಬ್ರೀಟಿಷರು ನಮ್ಮಲ್ಲಿರುವ ಅರಾಜಕತೆ, ಏಕತೇಯ ಕೊರತೆಯನ್ನು ಮನಗೊಂಡು ಸುಮಾರು ೩೦೦ ವರ್ಷಗಳ ಕಾಲ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದರು ಬ್ರೀಟಿಷರನ್ನು ನಮ್ಮ ದೇಶದಿಂದ ಹೊರಗಟ್ಟಲು ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಬೇಕಾಯಿತು. ಮಹಾತ್ಮ ಗಾಂದೀಜಿಯವರು ಬರದಿದ್ದರೆ ಇನ್ನೂ ಎಷ್ಟು ವರ್ಷ ಗುಲಾಮಗಿರಿಗೆ ಒಳಪಡುತ್ತಿದ್ದೆವು ಎಂದು ಆತಂಕ ವ್ಯಕ್ತಪಡಿಸಿದರು.
ಶರಣ ಸುನೀಲ ಹಾದಿಮನಿ ದೇಶಭಕ್ತಿ ಗೀತೆ ಹಾಡಿದರು, ಶರಣ ಶಿವಬಸಯ್ಯ ವೀರಾಪೂರ ನಿರೂಪಿಸಿದರು. ಶರಣ ಪಂಚಾಕ್ಷರಿ.ಎನ್.ಎಮ್. ವಂದಿಸಿದರು.

ಬಸವಗಿರಿಧಾಮ ದಲ್ಲಿ ಧ್ವಜಾರೋಹಣ
ಕೊಪ್ಪಳ :- ರಾಷ್ಟ್ರೀಯ ಬಸವದಳ ಟ್ರಸ್ಟ್ (ರಿ) ಕೊಪ್ಪಳ ಇವರಿಂದ ನಗರದ ಬಸವಗಿರಿಧಾಮದಲ್ಲಿ ೬೭ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು  ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶರಣ ಸತೀಶ ಮಂಗಳೂರು ನೆರವೇರಿಸಿ ಮಾತನಾಡುತ್ತಾ ರಾಷ್ಟ್ರೀಯ ಬಸವದಳ ಒಂದು ದೇಶ ಭಕ್ತ ಮತ್ತು ಆಧ್ಯಾತ್ಮೀಕ ಸಂಸ್ಥೆಯಾಗಿದ್ದು ಗುರು ಬಸವಣ್ಣನವರ ಸರಳ ಜೀವನದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಕಂಕಣ ಬದ್ದವಾಗಿದೆ. ನಗರದ ಇನ್ನೂ ಹೆಚ್ಚು ಹೆಚ್ಚು ಬಸವ ಭಕ್ತರು ಈ ಕಾರ್ಯದಲ್ಲಿ ಕೈ ಜೋಡಿಸಿ ದೇಶಪ್ರೇಮ ಹಾಗೂ ಬಸವಾದಿ ಪ್ರಮಥರ ಋಣವನ್ನು ತಿರಿಸಲು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಶರಣ ಲಿಂಗನಗೌಡ ಪೊಲೀಸಪಾಟೀಲ, ಶರಣ ಅಮರೇಗೌಡ ಪಾಟೀಲ, ಶರಣ ಸಂಗಮೇಶ ಕಡಗದ, ಶರಣ ಕೆ.ಈಶ್ವರ ಲಿಂಗಾಯತ, ಇನ್ನೂ ಅನೇಕ ಶರಣರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment