ಗುಪ್ತದಳದ ಪಿಐ ಆಗಿ ಕೆ. ರಾಮರಾವ್ ಅಧಿಕಾರ ಸ್ವೀಕಾರ

ಕೊಪ್ಪಳ ಜು. ೦೭: ರಾಜ್ಯ ಗುಪ್ತದಳದ ಕೊಪ್ಪಳ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕೆ. ರಾಮರಾವ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಅವರು ೧೯೯೬ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ನೇಮಕ ಹೊಂದಿ ಮಂಗಳೂರು, ಭಟ್ಕಳ, ಕಾರವಾರ, ಕುಂದಾಪುರಗಳಲ್ಲಿ ಕೆಲಸ ನಿರ್ವಹಿಸಿ, ೨೦೦೨ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿ ಕಾರವಾರ, ಮಂಗಳೂರು ಹಾಗೂ ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ರಾಜ್ಯ ಗುಪ್ತ಼ದಳದ ಕೇಂದ್ರ ಕಛೇರಿಯಲ್ಲಿಕರ್ತವ್ಯ ನಿರ್ವಹಿಸಿ ಅಲ್ಲಿಂದ ಇಂದು ಕೊಪ್ಪಳ ಗುಪ್ತ಼ದಳದ ಘಟಕದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡರು. ಇವರು ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಗುಪ್ತದಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Please follow and like us:
error