ಗೌರಿ-ಗಣೇಶ ಹಬ್ಬ : ನಿಷೇಧಾಜ್ಞೆ ಜಾರಿ

  ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ  ಮಧ್ಯಪಾನ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಜಾರಿಗೊಳಿಸಿದ್ದಾರೆ. 
  ನಿಷೇಧಾಜ್ಞೆಯನ್ವಯ ಗಣೇಶ ವಿಸರ್ಜನೆ ೩ನೇ ದಿನ ಅಂದರೆ ಸೆ. ೧೧ ರಿಂದ ೧೨ ರವರೆಗೆ ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ, ೫ನೇ ದಿನ ಅಂದರೆ ಸೆ. ೧೩ ರಿಂದ ೧೪ ರವರೆಗೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ, ೭ನೇ ದಿನ ಅಂದರೆ ಸೆ.೧೫ ರಿಂದ ೧೬ ರವರೆಗೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಮತ್ತು ಹುಲಿಗಿ ಗ್ರಾಮಗಳ ೫ ಕಿ.ಮೀ. ವ್ಯಾಪ್ತಿಯಲ್ಲಿ.  ೯ನೇ ದಿನ ಅಂದರೆ ಸೆ.೧೭ ರಿಂದ ೧೮ ರವರೆಗೆ ಗಂಗಾವತಿ ನಗರ ಮತ್ತು ಕುಕನೂರ ಪಟ್ಟಣ ವ್ಯಾಪ್ತಿಯ ೫ ಕಿ.ಮೀ. ವ್ಯಾಪ್ತಿಯಲ್ಲಿ.  ೧೧ನೇ ದಿನ ಅಂದರೆ ಸೆ.೧೯ ರಿಂದ ೨೦ ರವರೆಗೆ ಗಂಗಾವತಿ ನಗರ ವ್ಯಾಪ್ತಿಯಲ್ಲಿ ಆಯಾ ದಿನದಂದು ಬೆಳಿಗ್ಗೆ ೦೬ ಗಂಟೆಯಿಂದ ಮರುದಿವಸ ಬೆಳಿಗ್ಗೆ ೦೮ ಗಂಟೆಯವರೆಗೆ ನಿಷೇಧಿತ ವಲಯದ ಪ್ರದೇಶಗಳಲ್ಲಿ ಎಲ್ಲಾ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಎಲ್ಲಾ ತರಹದ ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ  

.

Please follow and like us:
error