ಕೆಜೆಪಿ ಸಯ್ಯದ್ ನಾಮಪತ್ರ ಸಲ್ಲಿಕೆಗೆ ಶೃತಿ ಆಗಮನ

ಕೊಪ್ಪಳ, ಏ.೧೬:   ದಿ. ೧೭ ರಂದು ಬೆಳಿಗ್ಗೆ ೯ ಗಂಟೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷದ ಅಭ್ಯರ್ಥಿ ಕೆ.ಎಂ. ಸಯ್ಯದ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. 
ನಾಮಪತ್ರಿಕೆ ಪೂರ್ವದಲ್ಲಿ ನಡೆಯುವ ಮೆರವಣಿಗೆಯಲ್ಲಿ ಚುನಾವಣೆ ಪ್ರಚಾರಾರ್ಥವಾಗಿ ಖ್ಯಾತ ಚಲನಚಿತ್ರ ನಟಿ ಶೃತಿ ಆಗಮಿಸಲಿದ್ದಾರೆ. ಕಳೆದ ದಿ. ೧೩ ರಂದು ಕೆಜೆಪಿ ಪಕ್ಷದ ಅಭ್ಯರ್ಥಿ ಕೆ.ಎಂ. ಸಯ್ಯದ್ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು ಈ ಬಾರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಗುವುದು. 
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮಟ್ಟದ ನಾಯಕರು, ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ತಾಲೂಕಾಧ್ಯಕ್ಷ ಪ್ರಪುಲ್‌ಗೌಡ, ಮುಖಂಡರಾದ ಅಜ್ಜುಖಾದ್ರಿ, ಶಾಮೀದ್‌ಸಾಬ ಕಿಲ್ಲೇದಾರ, ಡಂಬಳ್ ಸರ್, ಮಹಿಬೂಬ ಮುಲ್ಲಾ, ಹನುಮಂತಪ್ಪ, ಪರಸಪ್ಪ ರಾಠೋಡ ಸೇರಿದಂತೆ ಪಕ್ಷ ಪದಾಧಿಕಾರಿಗಳು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಲಿದ್ದಾರೆ ಅದೇ ರೀತಿ ಸುತ್ತಲಿನ ನೂರಾರು ಕಾರ್ಯಕರ್ತರು ಪಾಲ್ಗೊಂಡು ಮೆರವಣಿಗೆ ಮೆರಗುತರಲಿದ್ದಾರೆ.

Related posts

Leave a Comment