fbpx

ಶಿಕ್ಷಕರಿಗೆ ವೇತನವಿಲ್ಲದೇ ತೊಂದರೆ: ಅನುದಾನ ಓದಗಿಸಲು ಸಿಎಂ ಗೆ ಮನವಿ

ಕೊಪ್ಪಳ,ಮಾ.೦೩: ಕಳೆದೆರಡು ತಿಂಗಳುಗಳಿಂದ ವೇತನವಿಲ್ಲದೇ ತಾಲೂಕಿನ ಪ್ರೌಢ ಶಾಲೆ ಶಿಕ್ಷಕರು ಪರದಾಡುವಂತಾಗಿದ್ದು ಶೀಗ್ರವೇ ಅನುದಾನ ಓದಗಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜನ ಪ್ರೌಢ ಶಾಲೆ ವಿಭಾಗ ಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಾಶೀಮಸಾಬ ಸಂಕನೂರು ಪತ್ರ ಬರೆದು ಒತ್ತಾಯಿಸಿದ್ದಾರೆ.
ತಮ್ಮ ನಾಯಕತ್ವ ಆಢಳಿತದಲ್ಲಿ ಅತ್ಯಂತ ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕಲ್ಯಾಣ ಕರ್ನಾಟಕದ ನಿರ್ಮಾಣಕ್ಕಾಗಿ ತಮ್ಮ ನಿರಂತರ ಪರಿಶ್ರಮಕ್ಕೆ ನಮ್ಮ ತಾಲೂಕ ಸಂಘದಿಂದ ಅಭಿನಂದನೆಗಳು. 
ಕಳೆದ ೨ ತಿಂಗಳಿಂದ ಕೊಪ್ಪಳ ತಾಲೂಕಿನ ಪ್ರೌಢಶಾಲೆ ಶಿಕ್ಷಕರಿಗೆ ವೇತನವಿಲ್ಲದೇ ಪರದಾಡುತ್ತಿದ್ದಾರೆ. ಕೇವಲ ಸಂಬಳ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಶಿಕ್ಷಕರಿಗೆ ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ೪ ನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಮ್ಮ ತಾಲೂಕಿನ ಸೆಕೆಂಡರಿ ಶಿಕ್ಷಣಕ್ಕೆ ರೂ.೬೨,೨೪,೦೦೦ ಗಳ ಅನುದಾನ ಕಡಿಮೆ ಬಿಡುಗಡೆಯಾಗಿದೆ. ಇದರಿಂದ ಶಿಕ್ಷಕರಿಗೆ ಜನೇವರಿ- ೨೦೧೪ ರಿಂದ ಇದುವರೆಗೂ ವೇತನವಿಲ್ಲದೇ ತೊಂದರೆಯಾಗುತ್ತಿದೆ. 
ಕಳೆದ ೫-೬ ವರ್ಷಗಳಿಂದ ತಾಲೂಕಿನ ಪ್ರೌಢಶಾಲೆ ಶಿಕ್ಷಕರ ವೇತನ ಸರಿಯಾಗಿ ನಿಗಧಿತ ಸಮಯದಲ್ಲಿ ಆಗದೇ ನಿರಂತರವಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ದಯಾಳುಗಳಾದ ತಾವುಗಳು ಈ ಅನುದಾನವನ್ನು ಬಿಡುಗಡೆಗೊಳಿಸುವಂತೆ ತಾಲೂಕಿನ ಶಿಕ್ಷಕರೆಲ್ಲಾ ಓಕ್ಕೋರುಲಿನಿಂದ ಮನವಿ ಮಾಡುತ್ತಿರುವುದಾಗಿ ಅವರಿಲ್ಲಿ ಸಿ.ಎಂ. ಪತ್ರದಲ್ಲಿ ಮನವಿ ಮಾಡಿದ್ದಾರೆ. 
Please follow and like us:
error

Leave a Reply

error: Content is protected !!