ವಿವೇಕಾನಂದ ಶಾಲೆಯಲ್ಲಿ ಗಣರಾಜ್ಯೋತ್ಸವ

 :  ನಗರದ ಲಯನ್ಸ್ ಕ್ಲಬ್ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ೬೬ ನೇ ಗಣರಾಜ್ಯೋತ್ಸವವನ್ನು ಆಛರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಧ್ವಜಾರೋಹಣ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳಾದ ಸಾರಾ, ನಮ್ರತಾ, ಭಾವನಾ, ಆಫಿಯಾ, ಶಿಕ್ಷಕಿ ಅಂಬುಜಾ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಗುರುರಾಜ ಹಲಗೇರಿ, ಲಯನ್ ಸುರೇಶ ಸಂಚೇತಿ, ಲಯನ್ ಪರಮೇಶ್ವರಪ್ಪ ಕೊಪ್ಪಳ, ಪ್ರಾಚಾರ್ಯ ಎ. ಧನಂಜಯನ್, ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 
ವಿದ್ಯಾರ್ಥಿಗಳಾದ ಶಶಿಧರ ಅಮಟಿ ಮತ್ತು ನೀತು ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಶಾಂತ ಜೋಷಿ ಸ್ವಾಗತಿಸಿದರೆ, ಪರಿತಾ ಶರ್ಮಾ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಷ್ಟ್ರೀಯ ನಾಯಕರ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳು ಗಮನ ಸೆಳೆದರು.
Please follow and like us:

Related posts

Leave a Comment