ಶ್ರೀ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಸಿ.ಸಿ. ಕ್ಯಾಮರಾಗಳ ಅಳವಡಿಕೆ

 ಇತ್ತೀಚಿಗೆ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ೨೬ ಸಿ.ಸಿ ಕ್ಯಾಮರಾಗಳನ್ನು ಜೋಡಿಸಲಾಗಿದೆ. ಕಾಲೇಜಿನ ನೆಲಮಹಡಿ, ಮೇಲ್ಮಹಡಿ, ಗ್ರಂಥಾಲಯದ ಹೊರಭಾಗ, ಕಾಲೇಜಿನ ಪ್ರವೇಶದ್ವಾರದಲ್ಲಿ ಒಟ್ಟು ೪ ಕಡೆ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ವರ್ಗಕೋಣೆ, ಪ್ರಯೋಗಾಲಯ, ಅಧ್ಯಾಪಕರ ಕೊಠಡಿ, ಪ್ರಾಚಾರ್ಯರ ಚೇಂಬರ್ ಮತ್ತು ಕಾರ್ಯಾಲಯ, ಗ್ರಂಥಾಲಯ ಹೀಗೆ ೨೬ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ, ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಶಿಸ್ತು, ನಡತೆ ಮತ್ತು ಇತರ ಚಲನವಲನಗಳ ಸೂಕ್ಷ್ಮ ಗಮನಕ್ಕಾಗಿ ಇದನ್ನು ಜಾರಿಗೆ ತಂದಿದ್ದಾರೆ. ಈ ಎಲ್ಲ ಕ್ಯಾಮರಾಗಳ ವೀಕ್ಷಣಾ ಹಾಗೂ ನಿಯಂತ್ರಣ ಕೊಠಡಿಯು ಪ್ರಾಚಾರ್ಯರ ಚೇಂಬರ್‌ನಲ್ಲಿ ೪೨ ಇಂಚ್ ಮಾನಿಟರ್‌ನಲ್ಲಿ ಏಕಕಾಲಕ್ಕೆ ನೋಡಬಹುದು. ಒಟ್ಟು ಎರಡೂವರೆ ಲಕ್ಷ ರೂ.ಗಳ ವೆಚ್ಚದಲ್ಲಿ ಬಳ್ಳಾರಿಯ ತಂತ್ರಜ್ಞಾನ ತಂಡವೊಂದು ೧೫ ದಿವಸಗಳ ಅವಧಿಯಲ್ಲಿ ಈ ಕಾರ್ಯ ನೆರವೇರಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಧನಾತ್ಮಕ ಪ್ರಗತಿಗಾಗಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಸಲಾಗಿದೆ ಎಂದು ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ತಿಳಿಸಿದ್ದಾರೆ.

Leave a Reply