ದೇಶದ ರಕ್ಷಣೆಗೆ ಯುವಕರ ಪಾತ್ರ ಅತ್ಯವಶ್ಯಕ: ಪರಮಾನಂದ

ಕೊಪ್ಪಳ, ಅ. ೧೫: ದೇಶದ ಸ್ವಾತಂತ್ರ್ಯಕ್ಕೆ ಅನೇಕ ನಾಯಕರ ತ್ಯಾಗ ಬಲಿದಾನದಿಂದಾಗಿ ಇಂದು ನಮ್ಮಗೆ ಸ್ವಾತಂತ್ರ್ಯ ದೊರೆತಿದ್ದು, ಅದೇ ರೀತಿ ಭಯೋತ್ಪಾದಕರಿಂದ ದೇಶದ ರಕ್ಷಣೆ ಹಾಗೂ ಸ್ವಾತಂತ್ರ್ಯ ಉಳಿವಿಗೆ ಇಂದಿನ ಯುವಕರ ಪಾತ್ರ ಅತ್ಯವಶ್ಯಕವಾಗಿದೆ ಎಂದು ಬನ್ನಿಕಟ್ಟಿ ಪೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು.
ಅವರು ಇಂದು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ೬೭ ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ನೇರವೇರಿಸಿ ಮಾತನಾಡಿ, ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಮೊಗಲರ, ಪೋರ್ಚಗೀಸರ, ಆದಿಲ್‌ಶಾಹಿಗಳ ಹಾಗೂ ಬ್ರಿಟಿಷರ ಕೈವಶದಲ್ಲಿ ಸುಮಾರು ೨೦೦ ವರ್ಷಗಳ ಕಾಲ ಪರಕೀಯರ ಆಢಳಿತದಲ್ಲಿತ್ತು. ಇವರೆಲ್ಲರೂ ಭಾರತದ ಸ್ವಾರ್ಥ ಹಾಗೂ ಭ್ರಷ್ಟರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸ್ವಾಭಿಮಾನಿ ಭಾರತೀಯರ ಮೇಲೆ ದೌರ್ಜನ್ಯವೆಸಗುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಲೋಕಮಾನ್ಯ ತಿಲಕ್, ಸರದಾರ ವಲ್ಲಬಾಯಿ ಪಟೇಲ್, ಸುಭಾಸ್ ಚಂದ್ರಬೋಸ್, ಮಹಾತ್ಮ ಗಾಂಧಿಜೀ ಸೇರಿದಂತೆ ಅನೇಕ ಮಹನೀಯರು ಭಾರತೀಯರನ್ನು ಜಾಗೃತಿಗೊಳಿಸುವ ಮೂಲಕ ದೇಶ ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೬೭ ವರ್ಷಗಳು ಗತಿಸಿದರೂ ದೇಶದಲ್ಲಿ ಭಯೋತ್ಪಾಧನೆ ತಾಂಡವಾಡುತ್ತಿದ್ದು ದೇಶಕ್ಕೆ ಕಂಟಕವಾಗಿರುವ ದೇಶದ ಓಳಗಿನ ಮತ್ತು ಹೊರ ದೇಶದ್ರೋಹಿಗಳ ನಿಗ್ರಹಕ್ಕೆ ಯುವ ಪಡೆ ಮುಂದಾಗಬೇಕಿದೆ ಎಂದು ಅವರಿಲ್ಲಿ ಕರೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಕರಿಬಸಪ್ಪ ಪಲ್ಲೆದ ಮಾತನಾಡಿ, ದೇಶದ ಸ್ವಾತಂತ್ರ್ಯದ ನಂತರ ದೇಶ ತೀರ ಹಿಂದೂಳಿದ್ದು ದೇಶದಲ್ಲಿ ನಿರುದ್ಯೋಗ, ಬಡತನ, ಅನಕ್ಷರತೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು, ಇದರ ಬಗ್ಗೆ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ದೇಶದ ಜನತೆ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ರಮೇಶ ಬಿಸೆಟ್ಟಿ, ಈರಪ್ಪ ಅಂಗಡಿ, ಮಂಜುಳಾ ಮೀರಜಕರ್, ಲಕ್ಷ್ಮೀ ಸುರ್ವೆ, ಮಂಜುಳಾ ಹೂಗಾರ, ಜಯರಾಜ ಬೂಸದ್, ರಡ್ಡೇರ್, ವೀರಯ್ಯಸ್ವಾಮಿ ಒಂಟಿಗೋಡಿಮಠ, ಗೋಪಾಲ ಗುಡಿ, ವಿ.ಮಂಜುಳಾ, ಶೋಭಾ ಗಡಾದ, ಮಂಜುಳಾ ನಾಲ್ವಾಡ್, ತಾಹೇರ್‌ಬೇಗಂ, ಶಾರದಮ್ಮ ತಳಬಾಳ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 
Please follow and like us:

Related posts

Leave a Comment