ಮದ್ಯಪಾನ ಮುಕ್ತ ಕರ್ನಾಟಕ ಆಂದೋಲನ ಬೃಹತ್ ರ್‍ಯಾಲಿ.

ಕೊಪ್ಪಳ-16- ಆಕ್ಟೊಬರ್ ೨ ಗಾಂಧೀಜಿ ಜಯಂತಿ ಪ್ರಯುಕ್ತ  ವೆಲ್ಪೇರ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾದ್ಯಾಂತ ಮದ್ಯಪಾನ ಮುಕ್ತ ಕರ್ನಾಟಕ ಆಂದೋಲನವನ್ನು ಹಮ್ಮಿಕೊಂಡಿದ್ದು ಆಂದೋಲನದ ನಿಮಿತ್ಯ  ಕೊಪ್ಪಳದಲ್ಲಿ ದಿನಾಂಕ : ೧೭-೧೦-೨೦೧೫ ರಂದು ಬೆಳಗ್ಗೆ ೧೦:೦೦ ಗಮಟೆಗೆ ಪಕ್ಷದ ರಾಜ್ಯಾದ್ಯಕ್ಷರಾದ ಶ್ರೀ ಅಕ್ಬರಅಲಿ ಉಡುಪಿಯವರ ನೇತೃತ್ವದಲ್ಲಿ ಬೃಹತ್ ರ್‍ಯಾಲಿಯನ್ನು ಹಮ್ಮಿಕೊಂಡಿದ್ದು. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಹಾಗೂ ಜನಾಬ್ ನಜೀರ್ ಅಮ್ಮದ್ ಮುಪ್ತಿ ಮತ್ತು ಇಮಾಮ್ ಮಸ್ದಿದೆ ಯುಸೋಫಿಯಾ ಕೊಪ್ಪಳ ರ್‍ಯಾಲಿಗೆ ಚಾಲನೆ ನೀಡುವರು ರ್‍ಯಾಲಿಯು ಶಾಂತಿಯುತವಾಗಿ ಗಡಿಯಾರ ಕಂಬದಿಂದ ೧೦: ಗಂಟೆಗೆ ಪ್ರಾರಂಭವಾಗಿ ಜವಾಹರ ರಸ್ತೆ ಮಾರ್ಗವಾಗಿ ಅಶೋಕ ಸರ್ಕಲ್ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಮದ್ಯಪಾನವು ಎಲ್ಲಾ ಕೆಡಕುಗಳ ಕೀಲಿ ಕೈ ಯಾಗಿದ್ದು ಈ ಕೆಡಕನ್ನು ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ರಾಜ್ಯದ ಸಮಸ್ತ ಜನಪರ ಸಂಘಟನೆಗಳು, ಬುದ್ದಿಜೀವಿಗಳು, ಸಂಘಸಂಸ್ಥೆಗಳು, ಸರ್ಕಾರದಮೇಲೆ ಒತ್ತಡ ಹೇರಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸುವ ದಿಕ್ಕಿನಲ್ಲಿ ಮತ್ತು ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಕ್ರೀಯಾಶೀಲರಾಗಬೇಕು. ಆದ ಕಾರಣ ತಾವು ತಮ್ಮ ಅಮೂಲ್ಯವಾದ ಸಮಯ ಹಾಗೂ ಬೆಂಬಲವನ್ನು ನೀಡಬೇಕೆಂದು ಕೊಪ್ಪಳ ಜಿಲ್ಲೆಯ ಜನಪರ ಸಂಘಟನೆಗಳು ಬುದ್ದಿಜೀವಿಗಳು ಸಂಘಸಂಸ್ಥೆಗಳಲ್ಲಿ ಕಳಕಳಿಯ ವಿನಂತಿ. ಆದಿಲ್ ಪಟೇಲ್ ಜಿಲ್ಲಾಧ್ಯಕ್ಷರು ಹಾಗೂ ಮಹ್ಮದ್ ಅಲೀಮುದ್ದಿನ್ ಜಿಲ್ಲಾ ಸಂಚಾಲಕರು ಮದ್ಯಪಾನ ಮುಕ್ತ ಕರ್ನಾಟಕ ಆಂದೋಲನ ತಿಳಿಸಿದ್ದಾರೆ.

Leave a Reply