ಸೆ.೧೫ಕ್ಕೆ ಕೊಪ್ಪಳ ಜಿಲ್ಲಾಮಟ್ಟದ ದಸರಾ, ೧೬ಕ್ಕೆ ಮಹಿಳಾ ಕ್ರೀಡಾಕೂಟ

ಕೊಪ್ಪಳ ಸೆ. ೧೩ (ಕ.ವಾ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸೆ. ೧೫ ರಂದು ಜಿಲ್ಲಾಮಟ್ಟದ ದಸರಾ ಹಾಗೂ ೧೬ರಂದು ಮಹಿಳಾ (ಪೈಕಾ) ಕ್ರೀಡಾಕೂಟವನ್ನು ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆ, ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಏರ್ಪಡಿಸಲಾಗಿದೆ. 
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತ ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್, ಕಬ್ಬಡ್ಡಿ, ಖೋಖೋ, ಫುಟ್ಬಾಲ್, ವ್ಹಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನ್ನಿಸ್, ಹ್ಯಾಂಡ್‌ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಆರ್ಹರಿರುತ್ತಾರೆ. 
ತಾಲೂಕಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಮಾತ್ರ ತಾಲೂಕಾ ಕೇಂದ್ರ ಸ್ಥಾನದಿಂದ ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೋಗಿ ಬರುವ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಯನ್ನು ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿ.ಎನ್.ಘಾಡಿ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ ಅಥವಾ ಇಲಾಖೆಯ ಹಿರಿಯ ವ್ಹಾಲಿಬಾಲ್ ತರಬೇತುದಾರ ಸಿ.ಎ.ಪಾಟೀಲ್- ೯೩೪೨೩೮೭೯೩೫ ಹಾಗೂ ಖೋಖೋ ತರಬೇತುದಾರ ಯತಿರಾಜು.ಎ.ಎನ್- ೯೪೪೮೬೩೩೧೪೬ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಸೆ.೧೮ ರಿಂದ ಕೊಪ್ಪಳ ಜಿಲ್ಲಾಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ
ಕೊಪ್ಪಳ ಸೆ. ೧೩ (ಕ.ವಾ) : ಗ್ರಾಮೀಣ ಭಾಗದ ಕ್ರೀಡಾಪಟುಗಳ ಅಭಿವೃದ್ಧಿಗೋಸ್ಕರ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿಯ ಗ್ರಾಮೀಣ (ಪೈಕಾ) ಕ್ರೀಡಾಕೂಟವನ್ನು ರಾಜ್ಯ ಸರ್ಕಾರದ ಆದೇಶದನ್ವಯ ಇದೇ ಪ್ರಥಮ ಬಾರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೆ. ೧೮ ಮತ್ತು ೧೯ ರಂದು ಎರಡು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣ, ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆ, ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟವನ್ನು ಬೆಳಿಗ್ಗೆ ೯.೦೦ ಗಂಟೆಗೆ ಏರ್ಪಡಿಸಲಾಗಿದೆ. 
        ತಾಲ್ಲೂಕು ಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟದಲ್ಲಿ ವಿಜೇತ ಕ್ರೀಡಾಪಟುಗಳು ಜಿಲ್ಲಾಮಟ್ಟಕ್ಕೆ ಸ್ಪರ್ಧಿಸಲು ಆರ್ಹರಿದ್ದು, ದಿನಾಂಕ ೩೧-೧೨-೨೦೧೧ಕ್ಕೆ ೧೬ ವರ್ಷ ವಯೋಮಿತಿ ಮೀರಿರಬಾರದು. ೩೧-೧೨-೧೯೯೫ ನಂತರ ಜನಿಸಿದವರು ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಈ ಕ್ರೀಡಾಕೂಟದಲ್ಲಿ ಬಾಲಕ/ಬಾಲಕೀಯರಿಗೆ ಅಥ್ಲೆಟಿಕ್ಸ್, ಕಬ್ಬಡ್ಡಿ, ಖೋಖೋ, ಫುಟ್ಬಾಲ್, ವ್ಹಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನ್ನಿಸ್, ಕುಸ್ತಿ, ಹ್ಯಾಂಡ್‌ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಾಲೂಕಿಗೆ ನಗದು ಪುರಸ್ಕಾರವಾಗಿ ೪೦,೦೦೦=೦೦, ದ್ವಿತೀಯ ಬಹುಮಾನ ೨೪,೦೦೦=೦೦ ಹಾಗೂ ತೃತೀಯ ಸ್ಥಾನ ಪಡೆದ ತಾಲೂಕಿಗೆ ನಗದು ಪುರಸ್ಕಾರವಾಗಿ ೮,೦೦೦=೦೦ ರೂ.ಗಳನ್ನು ನೀಡಲಾಗುವುದು.  ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಪ್ರತಿನಿಧಿಸಲು ಅರ್ಹರಾಗಿರುತ್ತಾರೆ. ನಿಗದಿಪಡಿಸಿದ ವಯೋಮಿತಿ ಮೀರಿದ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಮತ್ತು ಊಟೋಹಪಾರ ನೀಡಲಾಗುವುದಿಲ್ಲ. ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಇದರಲ್ಲಿ ಅನರ್ಹ ಎಂದು ಸಾಬೀತಾದಲ್ಲಿ ಅವರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ, ಊಟೋಪಹಾರ ನೀಡದೇ, ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳ ತಂಡಗಳನ್ನು ಕ್ರೀಡಾಕೂಟದಿಂದ ಅವರನ್ನು ಕೈ ಬಿಡಲಾಗುವುದು.  
ತಾಲೂಕಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಮಾತ್ರ ತಾಲೂಕಾ ಕೇಂದ್ರ ಸ್ಥಾನದಿಂದ ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೋಗಿ ಬರುವ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಯನ್ನು ಇಲಾಖೆಯಿಂದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ ಅಥವಾ  ಇಲಾಖೆಯ ಹಿರಿಯ ವ್ಹಾಲಿಬಾಲ್ ತರಬೇತುದಾರ ಸಿ.ಎ.ಪಾಟೀಲ್- ೯೩೪೨೩೮೭೯೩೫ ಹಾಗೂ ಖೋಖೋ ತರಬೇತುದಾರ ಯತಿರಾಜು.ಎ.ಎನ್- ೯೪೪೮೬೩೩೧೪೬ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
Please follow and like us:
error