You are here
Home > Koppal News > ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ(ಸರ್ಕಲ್) ಉದ್ಘಾಟನೆ

ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ(ಸರ್ಕಲ್) ಉದ್ಘಾಟನೆ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಎ.ಪಿ.ಎಂ.ಸಿ ೩ನೇ ಗೇಟ್ ಬಳಿ ಇರುವ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ(ಸರ್ಕಲ್) ದಿ: ೨೭/೦೭/೨೦೧೫ ರಂದು ಬುಧವಾರ ಮಧ್ಯಾಹ್ನ ೧೧:೧೫ ಸಮಯಕ್ಕೆ ಮಾನ್ಯ ಶಾಸಕರಾದ   ಇಕ್ಬಾಲ್ ಅನ್ಸಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ನಗರಸಭೆ ಅಧ್ಯಕ್ಷರು ಕೆ.ವೆಂಕಟೇಶ ಹಾಗೂ ಉಪಾಧ್ಯಕ್ಷರಾದ ಶರಣಪ್ಪ ಹುಡಿಜಾಲಿ ಆಗಮಿಸುವರು.ಹರಿಹರದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ೨೦೦೮ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಸರ್ಕಲ್ ಉದ್ಘಾಟನೆಯಾಗಲಿದ್ದು, ಸಮಾಜದ ಹಿರಿಯರು, ರಾಜಿಕೀಯ ಗಣ್ಯಮಾನ್ಯರು, ನೌಕರ ಬಾಂಧವರು, ಹರೇ ಸೈನ್ಯ ಯುವ ಘಟಕ ಮಹಿಳಾ ಘಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು. ಇಬ್ಬರು ಜಗದ್ಗುರುಗಳು ಕೂಡಿ ಭಾಗವಹಿಸುವ ಜಿಲ್ಲೆಯ ಪ್ರಥಮ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂದು ಯಶಸ್ವಿಗೊಳಿಸಬೇಕೆಂದು ವೀರಶೈವ ಪಂಚಮಸಾಲಿ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಬಸಪ್ಪ ಕಂಪ್ಲಿ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ಕಳಕನಗೌಡ ಪಾಟೀಲ್ ಹಿರಿಯರಾದ ಶ್ರೀ ಬಸವರಾಜ ರಾಮತ್ನಾಳ, ವೀರಭದ್ರಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶರಣಪ್ಪ ಹ್ಯಾಟಿ ಪತ್ರಿಕಾ ತಿಳಿಸಿದ್ದಾರೆ.

Leave a Reply

Top