fbpx

ಮಿಲ್ಲತ್ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ನಗರದ ಮಿಲ್ಲತ್ ಪಬ್ಬಿಕ್ ಶಾಲೆಯಲ್ಲಿ ಸೋಮವಾರದಂದು ಬೆಳಿಗ್ಗೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ ೧೨೩ನೇ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆಮಾಡಿ ಗೌರವ ಸಲ್ಲಿಸಿ ಆಚರಿಸಲಾಯಿತು.

  ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮುಖ್ಯ ಸಲಹೆಗಾರ ಎಂ.ಸಾದಿಕ್‌ಅಲಿ ಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಜೀವನವನ್ನು ಸಾಗಿಸಬೇಕು ಸರ್ವರಿಗೂ ಸಮಬಾಳು, ಸಮಪಾಲು ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ವ್ಯವಸ್ಥೆ  ಗಟ್ಟಿಹೊಳಿಸಲು  ಡಾ.ಬಿಆರ್.ಅಂಬೇಡ್ಕರ್ ರವರು ತೋರಿಸಿದ ಮಾರ್ಗದಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕೆಂದು ಅಭಿಪ್ರಾಯ ಪಟ್ಟರು. 
  ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಸ್ಯಯದ್ ಇಮಾಮ ಹುಸೇನ್ ಸಿಂದೋಗಿ, ಆಡಳಿತಾಧಿಕಾರಿ ಸ್ಯಯದ್ ಯಜದಾನಿ ಪಾಷಾ ಖಾದ್ರಿ, ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೇಗಂ ತಹಸಿಲ್ದಾರ್ ಪಾಲ್ಗೊಂಡಿದ್ದರು ಸಹ ಶಿಕ್ಷಕಿ ಶಾಹಿದಾಬೇಗಂ ಕುರಿ ಕಾರ್ಯಕ್ರಮ ನಿರೂಪಿಸಿದರೆ ಶಂಷಾದ್ ಬೇಗಂ ಖಾಜಿ ಕೊನೆಯಲ್ಲಿ ವಂದಿಸಿದರು.
Please follow and like us:
error

Leave a Reply

error: Content is protected !!