ಜಿಲ್ಲೆಗೆ ಭೇಟಿ ನೀಡುವ ಸಚಿವ ಹೆಚ್ ಆಂಜನೇಯ ಅವರಿಗೆ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರರಿಂದ ಮನವಿ

ಕೊಪ್ಪಳ,ಜೂ,೧೯:  ಇದೇ ದಿ. ೨೧ ರಂದು ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮಕ್ಕೆ ಆಗಮಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರಿಗೆ ಜಿಲ್ಲಾ ಕಾಂಗ್ರೆಸ್ ಪ.ಜಾ ವಿಭಾಗದ ವತಿಯಿಂದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಪೂಜಾರ ಮತ್ತು ಜಿಲ್ಲಾ ಪದಾಧಿಕಾರಿಗಳು ಸ್ವಾಗತ ಕೋರುವದರ ಜೊತೆಗೆ ಕೊಪ್ಪಳ ನಗರದಲ್ಲಿ ನಿರ್ಮಾಣವಾಗಬೇಕಾದ ಡಾ.ಬಾಬು ಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ ಕಲ್ಯಾಣ ಮಂಟಪ ತೀವ್ರ ಗತಿಯಲ್ಲಿ ಕಾಮಗಾರಿ ಕೈಗೆತ್ತುವ ಕುರಿತು ಮತ್ತು ದಲಿತರಿಗೆ ಸೂಕ್ತ ರಕ್ಷಣೆ ಕೊಡುವ ಕುರಿತು ಮನವಿ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಮರಿಯಪ್ಪ ಯತ್ನಟ್ಟಿ, ಪ್ರಕಾಶ ದದೇಗಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಂಗಪ್ಪ ಎಂ. ದೊಡ್ಡಮನಿ ಮಲ್ಲಿಕಾರ್ಜುನ ಪೂಜಾರ ಹನಮಂತಪ್ಪ ಮೇಗಳಮನಿ, ಡಿ.ಎಚ್.ಪೂಜಾರ ಸೇರಿದಂತೆ ಪ ಜಾ ವಿಭಾಗದ ಎಲ್ಲಾ ತಾಲೂಕ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿತ್ತಾರೆ ಎಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಹನುಮಂತಪ್ಪ ಎಸ್.ದೊಡ್ಡಮನಿ  ತಿಳಿಸಿದ್ದಾರೆ.

Leave a Reply