೬ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಿಂಚಿದ ಕೊಪ್ಪಳ.

ಕೊಪ್ಪಳ, ಅ. ೧೯. ಬಾಗಲಕೋಟೆಯ ಕಲಾ ಭವನದಲ್ಲಿ ಅಕ್ಟೋಬರ್ ೧೭ ಮತ್ತು ೧೮ ರಂದು ಎರಡು ದಿನಗಳ ಕಾಲ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳದ ೫ ಜನ ಪ್ರತಿಭಾವಂತರಿಗೆ ಪುರಸ್ಕಾರ ನೀಡಲಾಯಿತು.
೨೦೧೪ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಮಹಿಳಾ ಲೋಕ ಪತ್ರಿಕೆ ಸಂಪಾದಕರಾದ ಸಾವಿತ್ರಿ ಮುಜಮದಾರ ರವರ ಹೆಣ್ಣು ಹೆಜ್ಜೆ (ಅಂಕಣ ಬರಹ) ಕೃತಿಗೆ ಮತ್ತು ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಜಾಜಿ ದೇವೇಂದ್ರಪ್ಪರವರ ದೇವರ ರಾಜಕೀಯ ತತ್ವ (ಅನುವಾದ) ಕೃತಿಗಳಿ ಪುಸ್ತಕ ಪ್ರಶಸ್ತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯನವರು ಪ್ರಧಾನ ಮಾಡಿದರು.
ನಂತರ ಯುವ ಕವಿ ಸಿರಾಜ್ ಬಿಸರಳ್ಳಿರವರು ಕವಿಗೋಷ್ಠಿಯಲ್ಲಿ ನಮ್ಮೂರನ ಗಣೇಶಂಗೆ ಮಸೀದಿಯೆಂದರೆ ಪ್ರೀತಿ ಎಂಬ ವಿಢಂಬನಾತ್ಮಕ ಕವಿತೆ ವಾಚಿಸಿ ಜನರ ಮೆಚ್ಚುಗೆಗಳಿಸಿದರು. ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಹಾಗೂ ಪತ್ರಕರ್ತರಾದ ಮಂಜುನಾಥ ಜಿ. ಗೊಂಡಬಾಳರವರಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮತ್ತು ಐಟಿಬಿಟಿ ಸಚಿವ ಎಸ್. ಆರ್. ಪಾಟೀಲರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವ ಡಾ|| ಎಚ್. ಎಸ್. ಮಹದೇವಪ್ರಸಾದ, ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸತ್ಯಾನಂದ ಪಾತ್ರೋಟ, ಸಾಹಿತಿ ಬಿ.ಟಿ.ಲಲಿತಾ ನಾಯ್ಕ, ಕುಲಸಚಿವ ಡಾ. ರಂಗರಾಜ ವನದುರ್ಗ ಮತ್ತು ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮುಂತಾದವರು ಇದ್ದರು.

Please follow and like us:
error