You are here
Home > Koppal News > ಪೌರಾಯುಕ್ತ ರಮೇಶ್ ಪಟ್ಟೇದಾರರಿಂದ ದಲಿತ ಪತ್ರಕರ್ತರಿಗೆ ಕಿರುಕುಳ ಜಿಲ್ಲಾಧಿಕಾರಿಗೆ ಮೊರೆ.

ಪೌರಾಯುಕ್ತ ರಮೇಶ್ ಪಟ್ಟೇದಾರರಿಂದ ದಲಿತ ಪತ್ರಕರ್ತರಿಗೆ ಕಿರುಕುಳ ಜಿಲ್ಲಾಧಿಕಾರಿಗೆ ಮೊರೆ.

ಕೊಪ್ಪಳ. ಜು. ೦೩ ಕೊಪ್ಪಳ ನಗರಸಭೆಯಿಂದ ಪ.ಜಾ. ಪ.ಪಂ ದ  ಪತ್ರಕರ್ತರಿಗೆ ನಗರಸಭೆ ೨೦೧೪-೧೫ ಸಾಲಿನ ಎಸ್ ಎಫ್ ಸಿ ಅನುದಾನದಲ್ಲಿ ಕೊಡಬೇಕಾಗಿದ್ದ ಲ್ಯಾಪ್ ಟ್ಯಾಫ್ ತಗೆದುಕೊಳ್ಳಲು ಧನ ಸಹಾಯವನ್ನು ಕೊಡದೇ, ಇಲ್ಲಿಯ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಅನವಶ್ಯಕ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ದಲಿತ ಪತ್ರಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ  ಪತ್ರಕರ್ತರಿಗೆ ಕೊಪ್ಪಳ ನಗರಸಭೆಯಲ್ಲಿ ೨೦೧೪-೧೫ ಸಾಲಿನ ಎಸ್ ಎಫ್ ಸಿ ೨೪.೧೦ ಯೋಜನೆಯಡಿಯಲ್ಲಿ ಲ್ಯಾಪ್ ಟ್ಯಾಫ್‌ನ್ನು ತಗೆದುಕೊಳ್ಳಲು ಸಹಾಯ ಧನ ಕೊಡಲು  ಅರ್ಜಿ ಕರೆದಿದ್ದರು,ಅದರಂತೆ ಅರ್ಹ ಪತ್ರಕರ್ತರಿಂದ  ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಅನುಮೊದನೆ ಕೂಡಾ ದೊರೆತಿದೆ,ಆದರೂ ಸಹ ಇದನ್ನೆಲ್ಲಾ ಮೀರಿ ತನ್ನದೇ ಆಟವೆಂಬಂತೆ ಎಲ್ಲಾ  ದಲಿತ ಪತ್ರಕರ್ತರಿಗೆ ಕಿರುಕುಳ ನೀಡುತ್ತಾ ಪ್ರತಿ ದಿನ ಮುಂದುಡುತ್ತಿದ್ದಾರೆ.ಅನಾವಶ್ಯ ದಾಖಲೆಗಳನ್ನು ಕೇಳುತ್ತಾ ದಿನ ದೂಡುತ್ತಿದ್ದಾರೆ. ಮತ್ತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸಹಾಯ ಧನ ಕೊಡುವ ವಿಷಯ ಇಟ್ಟು ಸರ್ವ ಸದಸ್ಯರ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ. ಸಹಾಯ ಧನದ ಚಕ್ ಕೊಡುವಂತೆ ಅರ್ಹ ಪತ್ರಕರ್ತರು ಕೇಳಲು ಹೋದರೆ ನೀವು ಪತ್ರಕರ್ತರೆ ಅಲ್ಲ ಎಂದು ಪತ್ರಿಕೆಯನ್ನು ಬಿಸಾಕಿ ಉಡಾಫೆ ಮಾತನಾಡುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಕಳೆದ ಎರಡು ತಿಂಗಳ ಹಿಂದೆ ಸ್ಥಳೀಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರಿಂದ ಸಾಂಕೇತಿಕವಾಗಿ ಲ್ಯಾಪ್ ಟಾಫ್ ಸಹಾಯ ಧನದ ಚಕ್ ವಿತರಣೆ ಮಾಡಿ, ಪತ್ರಿಕೆಯಲ್ಲಿ ಪ್ರಚಾರ ತಗೆದುಕೊಂಡು ಈಗ ಪ್ರತಿದಿನ ಒಂದೊಂದು ಕಾರಣ ಹೇಳಿ ದಿನ ದೂಡುತ್ತಿದ್ದಾರೆ, ಮತ್ತು ತಮಗೆ ಕೊಡಬೇಕಾಗಿ ರುವುದನ್ನು ಕೊಟ್ಟ ಬಳಿಕ ಸಹಾಯ ಧನದ ಚಕ್ ಕೊಡುತ್ತೇನೆ ಎಂದು ಮಾಹಿತಿ ಕೇಳಲು ಹೋದ ಪತ್ರಕರ್ತರಿಗೆ ಹೇಳುತ್ತಿದ್ದಾರೆ ಇದರ ಅರ್ಥ ಏನು ಎಂದು ಜಿಲ್ಲಾಧಿಕಾರಿಗಳ ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ  ಪತ್ರಕರ್ತರಾದ ನಿಂಗಪ್ಪ ದೊಡ್ಡಮನಿ,ಬಸವರಾಜ ಗುಡ್ಲಾನೂರ,ಈರಣ್ಣ ಕಳ್ಳಿಮನಿ,ಹನುಮೇಶ ಮ್ಯಾಗಳಮನಿ,ನಾಗರಾಜ ಬೆಲ್ಲದ್, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Top