ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರ ಮೋಯಿನ್‌ಖಾನ್.

 ಕೊಪ್ಪಳ- ಸೆ,೦೫ ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸುವ ಶಕ್ತಿ ಶಿಕ್ಷಕರಲ್ಲಿದೆ ಶಿಕ್ಷಕ ಈ ದೇಶದ ನಿರ್ಮಾಪಕ. ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು  ಗ್ರೀನ್ ಲೈಫ್ ಅಕ್ಯುಫ್ರೇಶರ್ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥ ಅಕ್ಯುಫ್ರಶರ್ ಥೆರಪಿಸ್ಟ್ ಮೋ
  ಅವರು ಶನಿವಾರ ಇಲ್ಲಿನ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆವತಿಯಿಂದ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು. ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
  ಮುಂದುವರೆದು ಮಾತನಾಡಿದ ಅವರು ನಮ್ಮ ರೋಗ ನಿವಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಕೈಯಲ್ಲಿದೆ ಅಕ್ಯುಫ್ರಶರ್ ಮೂಲಕ ಬಹಳಷ್ಟು ರೋಗ ನಿವಾರಣೆ ಮಾಡಿಕೊಳ್ಳಬಹುದು ಯೋಗ ಕೂಡಾ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಿದೆ ಎಂದು ಗ್ರೀನ್ ಲೈಫ್ ಅಕ್ಯುಫ್ರೇಶರ್ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥ ಅಕ್ಯುಫ್ರಶರ್ ಥೆರಪಿಸ್ಟ್ ಮೋಯಿನ್‌ಖಾನ್ ಹೇಳಿದರು.
   ಈ ಸಂದರ್ಭದಲ್ಲಿ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮುಖ್ಯ ಸಲಹೆಗಾರ .ಸಾದಿಕ ಅಲಿ ಮಾತನಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು. ಅಮಾರಂಭದ ಅಧ್ಯಕ್ಷತೆಯನ್ನು ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಡಿ.ಆಸೀಫ್ ಕರ್ಕಿಹಳ್ಳಿ ವಹಿಸಿದ್ದರು. ಸಂಸ್ಥಾಪಕ ಸದಸ್ಯ ಅಬ್ದುಲ್ ಅಜೀಜ್ ಮಾನವಿಕರ್, ಮುಖ್ಯ ಶಿಕ್ಷಕ ಖಾಜಾ ಮೈನುದ್ದೀನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಯಿನ್‌ಖಾನ್ ಹೇಳಿದರು.

Please follow and like us:
error