fbpx

ನ.೦೮ ರಂದು ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ.

ಕೊಪ್ಪಳ, ನ.೦೭ (ಕ ವಾ) ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದ ನಾಗರಿಕ/ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್-೨೦೧೫ ರ ವಿಶೇಷ ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನ.೦೮ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨.೩೦ ರವರೆಗೆ  ಏರ್ಪಡಿಸಲಾಗಿದೆ.
     ರೂಲ್ ಸಂಖ್ಯೆವಾರು ಲಿಖಿತ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿದ್ದು ವಿವರ ಇಂತಿದೆ. ರೂಲ್ ನಂಬರ್ ೭೦೪೦೦೦೧ ರಿಂದ ೭೦೪೦೮೦೦ ರವರೆಗಿನ ಅಭ್ಯರ್ಥಿಗಳು ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾ ವಿದ್ಯಾಲಯದಲ್ಲಿ ಹಾಗೂ ೭೦೪೦೮೦೧ ರಿಂದ ೭೦೪೦೯೮೦ ರವರೆಗಿನ ಅಭ್ಯರ್ಥಿಗಳು ಶ್ರೀ ಶಾರದಮ್ಮ ವ್ಹಿ ಕೊತಬಾಳ, ಬಿಬಿಎಂ, ಬಿಸಿಎ, ಮತ್ತು ಬಿಕಾಂ ಮಹಾ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಲಿಖಿತ ಪರೀಕ್ಷೆಗಳನ್ನು ಬರೆಯಬೇಕು. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,  ಅಲ್ಲದೆ, ಲಿಖಿತ ಪರೀಕ್ಷೆಗೆ ಅರ್ಹತೆ ಗಳಿಸಿದ ಅಭ್ಯರ್ಥಿಗಳ ಪಟ್ಟಿ ಹಾಗೂ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಸಹ ಈ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ.
     ಕರೆ ಪತ್ರವನ್ನು ಪಡೆಯದೇ ಇರುವವರಿಗೆ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರೆ ಪತ್ರ, ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಫಲಿತಾಂಶ ಪತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ||ಕೆ.ತ್ಯಾಗರಾಜನ್ ಅವರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!