ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿರುವ ಶಾಸಕ ಹಿಟ್ನಾಳಗೆ ಸನ್ಮಾನ

 ಅಮೇರಿಕಾದಲ್ಲಿ ೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇ

ಳನ ಇದೇ ಅಗಸ್ಟ್ ೨೯, ೩೦ ಹಾಗೂ ೩೧ರಂದು ಮೂರುದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗಲಿರುವ ಈ  ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿರುವ ಕೊಪ್ಪಳ ಕ್ಷೇತ್ರದ ಶಾಸಕ ಕೆ,ರಾಘವೇಂದ್ರ ಹಿಟ್ನಾಳ ರವರಿಗೆ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಜಿ.ಸುರೇಶ್ ದೇಸಾಯಿ ನೇತೃತ್ವದಲ್ಲಿ ಶನಿವಾರದಂದು ಕೊಪ್ಪಳದಲ್ಲಿ ಶಾಸಕರಿಗೆ ಸನ್ಮಾನಿಸಲಾಯಿತು.

      ಯುಎಸ್‌ಎ ಅಮೇರಿಕಾದ ಸ್ಯಾನ್ ಹೊಸ ಕ್ಯಾಲಿಪೋರ್ನಿಯಾ ಉತ್ತರ ಕ್ಯಾಲಿಪೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಜರುಗಲಿರುವ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಮ್ಮ ನಾಡಿನ ನೆಲ, ಜಲ, ಸಂಸ್ಕೃತಿ ಪರಂಪರೆಗಳ ಬಗ್ಗೆ ವಿಶ್ವದ್ಯಾಂತ ಪರಿಚಯಿಸುವ ಕೆಲಸ ಹಾಗೂ ವಿಶ್ವ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಈ ಅಕ್ಕ ಸಮ್ಮೇಳನದಿಂದ ನಡೆಯಲಿ, ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಕೊಪ್ಪಳ ಶಾಸಕ ಕೆ,ರಾಘವೇಂದ್ರ ಹಿಟ್ನಾಳ ಮತ್ತು ಅವರ ಕುಟುಂಬದವರ ಪ್ರವಾಸ ಶುಭಕರವಾಗಲಿ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಜಿ.ಸುರೇಶ್ ದೇಸಾಯಿರವರು ಸನ್ಮಾನಿಸಿ ಶುಭ ಹಾರೈಸಿದರು.
      ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರಾದ ಅಂದಪ್ಪ ಜವಳಿ, ಎಂ.ವಿ.ಬಾಬು, ಶಂಭುಲಿಂಗ ಯಲಬುರ್ಗಿ, ಪ್ರೇಮಚಂದ್ ಜೈನ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
Please follow and like us:
error