fbpx

ಮಾಧ್ಯಮದವರ ಮೇಲೆ ಹಲ್ಲೆ : ನಿತ್ಯಾನಂದ ಗಡಿಪಾರಿಗೆ ಕರವೇ ಒತ್ತಾಯ

ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಕಪಟ ನಿತ್ಯಾನಂದ ಗಡಿಪಾರು ಮಾಡಿ ಕಾನೂನಿನ ಅಡಿಯಲ್ಲಿ ಬಂದಿಸಬೇಕೆಂದು ಪ್ರತಿಭಟನೆ ಮೂಲಕ ಪ್ರತಿಕೃತಿ ದಹಿಸಿ ಮನವಿ.

      ಬಹುದಿನಗಳ ಹಿಂದೆ ಕರ್ನಾಟಕದಲ್ಲಿ ನೆಲೆಸಿರುವ ಕಪಟ ಸನ್ಯಾಸಿಯಾದ ನಿತ್ಯಾನಂದಸ್ವಾಮಿ ಸನ್ಯಾಸಿ ವೇಷದಲ್ಲಿ ಮಾಡಬಾರದ ಕೆಲಗಳನ್ನು ಮಾಡಿ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುತ್ತಾ, ಮತ್ತು ಕರ್ನಾಟಕದ ಹೆರನ್ನುಹಾಳು ಮಾಡುತ್ತಾ ಹಾಗೂ ಸನ್ಯಾಸಿ ವೇಷದಲ್ಲಿ ಸ್ತ್ರೀಯರಿಗೆ ಕಾಮದ ಪಾಠ ಹೇಳುತ್ತಾ ಮತ್ತು ತನ್ನ ಆಶ್ರಮದಲ್ಲಿ ಕಾನೊನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತಾನೆ.
ನಿನ್ನೆ ದಿನಾಂಕ :೦೮-೦೯-೨೦೧೪ ರಂದು ಪುರುಷತ್ವ ಪರೀಕ್ಷೆ ನೆಡೆಸುವ ವೃದ್ಯಕೀಯ ಆಸ್ಪತ್ರೆಯಲ್ಲಿ. ಮಾಧ್ಯಮದವರ ಮೇಲೆ ತಾನು ಮತ್ತು ತನ್ನ ಗುಂಡಾ ಶಿಷ್ಯಂದಿರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುತ್ತಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಕುಮಾರ ಶಟ್ಟಿ (ಬಣ)ವು ತೀವ್ರವಾಗಿ ಖಂಡಿಸುತ್ತದೆ. ಮತ್ತು ಇಂತಹವರನ್ನು ರಾಜ್ಯ ಸರಕಾರವು ಕೋಡಲೇ ಗಡಿಪಾರು
ಮಾಡಬೇಕು ಮತ್ತು ಕರ್ನಾಟಕದಲ್ಲಿ ಇರುವ ಆಶಮದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು
          ಇವರ ಶಿಷ್ಯಬಳಗವನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಾಣ ವೇದಿಕೆಯು ಕರ್ನಾಟಕದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಪಂಪಣ್ಣ ನಾಯಕ ಹೇಳಿದ್ದಾರೆ
Please follow and like us:
error

Leave a Reply

error: Content is protected !!