You are here
Home > Koppal News > ೬೧ನೇ ಅಖಿಲ ಭಾರತ ಸಹಕಾರ ಸಪ್ತಾಯದ ೬ನೇ ದಿನ ಕಾರ್ಯಕ್ರಮ

೬೧ನೇ ಅಖಿಲ ಭಾರತ ಸಹಕಾರ ಸಪ್ತಾಯದ ೬ನೇ ದಿನ ಕಾರ್ಯಕ್ರಮ

 ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ., ನಿ., ನವಲಿ ಇವರ ಸಂಯುಕ್ತ ಆಶ್ರಯದಲ್ಲಿ ೬೧ನೇ ಅಖಿಲ ಭಾರತ ಸಹಕಾರ ಸಪ್ತಾಯದ ೬ನೇ ದಿನ ಕಾರ್ಯಕ್ರಮಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ನವಲಿಯಲ್ಲಿ ದಿನಾಂಕ : ೧೯-೧೧-೨೦೧೪ ರಂದು ಬೆಳಗ್ಗೆ ೧೧.೦೦ ಗಂಟೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳ ಹಾಲು ಒಕ್ಕೂಟದ ಅಧ್ಯಕ್ಷರಾದ ಎನ್.ಸತ್ಯನಾರಾಯಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸಹಕಾರ ಚಳುವಳಿಯ ಇತಿಹಾಸವನ್ನು ಮಲಕು ಹಾಕುತ್ತಾ ಸಹಕಾರ ಸಂಸ್ಥೆಗಳಿಂದ ಆರ್ಥಿಕವಾಗಿ ದುರ್ಬಲರಾದವರು ಸಬಲರಾಗಲು ಈ ಕ್ಷೇತ್ರ ಬಹಳ ಸೂಕ್ತವಾದ ಕ್ಷೇತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ಸೌಲಭ್ಯ ನೀಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತಿದ್ದು ಹೆಚ್ಚು ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹುಟ್ಟುಹಾಕಲು ನಾನು ಉತ್ಸುಕನಾಗಿದ್ದು ಅದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು. 
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ಧ ಸಹಕಾರಿ ನಿ., ನಿರ್ದೇಶಕರಾದ ಸಣ್ಣತೂಗಪ್ಪನವರು ಮಾತನಾಡುತ್ತಾ ಈ ಕ್ಷೇತ್ರದ ಸಾಧನೆ ಅಪಾರವಾಗಿದ್ದು ಈ ಕ್ಷೇತ್ರ ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಗೊಳ್ಳಬೇಕಾದರೆ ಯುವಕರು ಹಾಗೂ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರವೇಶಿಸಿ ಈ ಕ್ಷೇತ್ರವನ್ನು ಬಲಗೊಳಿಸಬೇಕೆಂದು ಕರೆ ನೀಡಿದರು. 
ಕಾರ್ಯಕ್ರಮ ಉದ್ದೇಶಿಸಿ ಜಡಿಯಪ್ಪ ಮುಕ್ಕುಂಪಿ ಹಾಗೂ ಸಿದ್ದರಾಮಗೌಡರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಶೇಖರಗೌಡ ಮಾಲೀಪಾಟೀಲ್‌ರವರು ಸಹಕಾರ ಸಪ್ತಾಹದ ಆಚರಣೆಗೆ ಮೂಲ ಉದ್ದೇಶ ಕುರಿತು ಮಾತನಾಡುತ್ತಾ ಜಿಲ್ಲೆಯಲ್ಲಿ ನವ್ಹಂಬರ್ ೧೪ ರಂದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ೬ನೇ ದಿನದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಸಪ್ತಾಯವನ್ನು ಆಚರಿಸುತ್ತಿದ್ದೇವೆ ಗಾಂಧಿ ಕಂಡ ರಾಮರಾಜ್ಯ ನನಸಾಗಬೇಕಾದರೆ ಪ್ರತಿಯೊಂದು ಗ್ರಾಮಕ್ಕೂ ಒಂದು ಶಾಲೆ ಒಂದು ಪಂಚಾಯತಿ ಹಾಗೂ ಒಂದು ಸಹಕಾರ ಸಂಘವನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಭಾರತ ರಾಮರಾಜ್ಯವಾಗುತ್ತದೆ ಸಹಕಾರ ಕ್ಷೇತ್ರದಲ್ಲಿರುವ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಈ ಕ್ಷೇತ್ರವನ್ನು ಸದೃಢಗೊಳಿಸಬೇಕೆಂದು ಕರೆ ನೀಡಿದರು. 
ಕಾರ್ಯಕ್ರಮದ ವೇದಿಕೆಯ ಮೇಲೆ ಆಸಿನರಾಗಿದ್ದ ನಾಗರಾಜ ತಂಗಡಗಿ, ಮರಿರಾಜ ಭಜಂತ್ರಿ, ಅಧ್ಯಕ್ಷರು, ಗ್ರಾಮ ಪಂಚಾಯತಿ, ಪಂಪನಗೌಡ ಮಾಲೀಪಾಟೀಲ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ., ನವಲಿ, ಎನ್.ಬಸನಗೌಡ ಪೋಲೀಸಪಾಟೀಲ್, ಜಿಲ್ಲಾ ಸಹಕಾರಿ ಯುನಿಯನ್  ನಿ., ನಿರ್ದೇಶಕರಾದ ಹೆಚ್.ವಿರೇಶಪ್ಪ, ಗವಿಸಿದ್ದೇಶ.ಹೆಚ್.ಹುಡೇಜಾಲಿಮಠ, ಜಿ.ನಾಗರಡ್ಡೆಪ್ಪ, ಮಾಜೀ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶರಣಬಸಪ್ಪ ಕಾಟ್ರಳ್ಳಿ, ಜಿ.ನಾಗೇಶ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ನವಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಈ ಕಾರ್ಯಕ್ರಮದ ನಿರೂಪಣೆಯನ್ನು ಶರಣಬಸಪ್ಪ ಕಾಟ್ರಳ್ಳಿ ಇವರು ನೇರವೇರಿಸಿದರು. ವಂದನಾರ್ಪಣೆಯನ್ನು ಗವಿಸಿದ್ದೇಶ.ಹೆಚ್.ಹುಡೇಜಾಲಿಮಠ ಇವರು ನೇರವೇರಿಸಿದರು. 

Leave a Reply

Top