ಶರಣರ ಭೇಧವಲ್ಲದ ಸಂಸ್ಕೃತಿ ಅಳವಡಿಸಿಕೊಳ್ಳಬೇಕಿದೆ.-ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್.

      ಶರಣರು ಜಾತಿ,ಮತ,ವರ್ಣ,ವರ್ಗ,ಲಿಂಗ ಬೇಧಗಳನ್ನು ಏಣಿಸದೆ ಭೇಧವಿಲ್ಲದ ಸಮ ಸಂಸ್ಕೃತಿಯನ್ನು ಇಂದು ನಾವು ಆಳವಡಿಸಿಕೊಳ್ಳಬೇಕಿದೆ.ಎಂದು ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್ ಹೇಳಿದರು.
ನಗರದ ಹುಡ್ಕೋ ಕಾಲೋನಿಯಲ್ಲಿರುವ ವಿಶ್ವಗುರು ಬಸವೇಶ್ವರ ಟ್ರಸ್ಟಿನ ಮಾಸಿಕ ’ಶರಣ ಹುಣ್ಣಿಮೆ’ ಯಲ್ಲಿ ಶಿವಶರಣ ಮಾದಾರ ಚನ್ನಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಮೇಲಿನಂತೆ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಸಿಂಪಿಗ, ಚಮ್ಮಾರ,ಹಡಪದ,ಅಂಬಿಗ,ಮುಂತಾದವುಗಳೆಲ್ಲ ವೃತ್ತಿಗಳು ಆದರೆ ಅವು ನಮ್ಮ ದೇಶದಲ್ಲಿ ಜಾತಿಗಳಾಗಿ ಬದಲಾಗಿದ್ದು ವಿಪರ್ಯಾಸ ಎಂದು ಹೇಳಿದರು.ಪ್ರತಿಭೆ ಇದ್ದರೆ ಯಾರು ಎಲ್ಲಿ ಬೇಕಾದರು ಬದುಕಬಹುದು ಎಂಬುದಕ್ಕೆ ಮಾದಾರ ಚೆನ್ನಯ್ಯ ಶರಣರು ಸಾಕ್ಷಿ. ಏಕೆಂದರೆ ತಮಿಳುನಾಡಿನಿಂದ ಬಂದು ಕನ್ನಡ ಕಲಿತು ವಚನಗಳನ್ನು ರಚನೆ ಮಾಡಿದರಲ್ಲದೆ ಇಡೀ ಶರಣ ಸಮೂಹದ ಹಿರಿಯ ವ್ಯಕ್ತಿಯಾಗಿದ್ದರು. ಬಸವಣ್ಣನವರಷ್ಟೇ ಅಲ್ಲದೇ ಬಹಳಷ್ಟು ವಚನಕಾರರು ಅವರ ವಚನಗಳಲ್ಲಿ ಮಾದಾರ ಚೆನ್ನಯ್ಯನವರನ್ನು ಸ್ಮರಿಸಿದ್ದಾರೆ ಎಂದು ವಚನಗಳನ್ನು ಉಲ್ಲೇಖಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾದಾರ ಸಮಾಜದ ವೆಬ್‌ಸೈಟ್ ನಿರ್ಮಾತೃ ಶ್ರೀ ನಾಗಲಿಂಗ ಮಾಳೆಕೊಪ್ಪರವರಿಗೆ ಟ್ರಸ್ಟಿನಿಂದ ಸನ್ಮಾನಿಸಲಾಯಿತು. ಶ್ರೀ iಹೇಶ ಹಡಪದ ಅಧ್ಯಕ್ಷರು ಭಾಗ್ಯನಗರ ಹಡಪದ ಸಮಾಜ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.
ನಂತರ ಮಡೆಸ್ನಾನ ಮತ್ತು ಎಡೆಸ್ನಾನ ವಿಷಯದ ಬಗ್ಗೆ ಅನುಭವ ಮಂಟಪದ ರೀತಿಯಲ್ಲಿಯೇ ಚರ್ಚೆ ನಡೆಸಲಾಯಿತು. ಸುಮಾರು ೩೦ ಕ್ಕೂ ಹೆಚ್ಚು ಜನ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
 ಅರ್ಚನಾ ಸಸಿಮಠ ನಿರೂಪಿಸಿದರು.ರಾಜೇಶ್ವರಿ ನಿಡಗುಂದಿ ಸ್ವಾಗತಿಸಿದರು.ರಾಜೇಶ ಸಸಿಮಠ ಶರಣು ಸಮರ್ಪಣೆ ಮಾಡಿದರು. ಟ್ರಸ್ಟ್ ನ ಅಧ್ಯಕ್ಷರಾದ ಎಮ್.ಬಸವರಾಜಪ್ಪ ಉಪಸ್ಥಿತರಿದ್ದರು.       

Leave a Reply