ಗವಿಸಿದ್ಧೇಶ್ವರ ಸ್ವಾಮಿಗಳಿಂದ ಗವಿಮಠ ಬ್ಲಾಗ್ ಉದ್ಘಾಟನೆ

೯-3-2010-
ಕೊಪ್ಪಳ : ಕೊಪ್ಪಳಗವಿಮಠದ ಪರಂಪರೆ,ಇತಿಹಾಸ,ವರ್ತಮಾನದ ಮಾಹಿತಿ ನೀಡುವ ಮತ್ತು ಗವಿಮಠ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಬ್ಲಾಗ್ ನ್ನು ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಇಂದು ಉದ್ಘಾಟಿಸಿದರು.
ಕನ್ನಡನೆಟ್.ಕಾಂನ ಸಂಪಾದಕ ಸಿರಾಜ್ ಬಿಸರಳ್ಳಿ ರೂಪಿಸಿರುವ ಬ್ಲಾಗ್ ಶ್ರೀಗವಿಮಠ.ಬ್ಲಾಗ್‌ಸ್ಪಾಟ್.ಕಾಂ ( srigavimath.blogspot.com ) ನ್ನು ಶ್ರೀ ಗವಿಮಠದಲ್ಲಿ ಸರಳವಾಗಿ ಉದ್ಘಾಟಿಸಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಮುನ್ನಡೆಸಿಕೊಂಡು ಹೋಗಿ , ಒಳ್ಳೆಯದಾಗಲಿ ಎಂದು ಹಾರೈಸಿದರು. ಇ ಪತ್ರಿಕೆಯ ಬಗ್ಗೆ ಕುತೂಹಲದಿಂದ ವಿಚಾರಿಸಿದ ಶ್ರೀಗಳು ಎಷ್ಟು ಜನರು ನೋಡುತ್ತಿದ್ದಾರೆ? ಯಾವ್ಯಾವ ವಿಷಯ ಹಾಕಿದ್ದೀರಿ ? ಗವಿಮಠದ ಜಾತ್ರೆಯ ಬಗ್ಗೆ ಮಾಹತಿ ಹಾಕಲಾಗಿದೆಯೇ? ಎಂದು ಕುತೂಹಲದಿಂದ ಕೇಳಿದರು. ಮಾಹಿತಿ ಎಲ್ಲರಿಗೂ ದೊರಕುವಂತೆ ಮಾಡುತ್ತಿರುವ ನಿಮ್ಮ ಕೆಲಸಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕೊಪ್ಪಳದ ಗವಿಮಠದ ಬಗೆಗಿನ ಎಲ್ಲ ಮಾಹಿತಿಯನ್ನು ಮತ್ತು ಫೋಟೋಗಳನ್ನು ಬ್ಲಾಗ್ ನಲ್ಲಿ ಹಾಕಲಾಗಿದೆ, ನಮ್ಮ ವೆಬ್ ಸೈಟಿನ ವಿಶಿಷ್ಟತೆ ಎಂದರೆ ನಾವು ಎಲ್ಲ ಮಾಹಿತಿಯನ್ನು ಕನ್ನಡದಲ್ಲಿ ಕೊಡುತ್ತಿದ್ದೇವೆ ಎಂದು ಸಂಪಾದಕ ಸಿರಾಜ್ ಬಿಸರಳ್ಳಿ ತಿಳಿಸಿದರು. ಆಸಕ್ತರು (srigavimath.blogspot.com ) ವಿಕ್ಷಿಸಲು ಸಂಪಾದಕ ಸಿರಾಜ್ ಬಿಸರಳ್ಳಿ ಕೋರಿದ್ದಾರೆ.

Leave a Reply