ಕಿನ್ನಾಳ ಗ್ರಾಮದಲ್ಲಿ ಮರುಳು ಸಾಗಾಣಿಕೆಯಿಂದ ಬೇಸತ್ತ ಬಡ ರೈತರ ಆಕ್ರಂದನ

ಕಿನ್ನಾಳ ಗ್ರಾಮದಲ್ಲಿ ಅಕ್ರಮ ಮರುಳು ಸಾಗಾಣಿಕೆ ಹೆಚ್ಚಾಗಿದ್ದು ಇದರ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು, ಇದು ಕಿನ್ನಾಳ ಗ್ರಾಮದ ಬಡರೈತರ ಪಾಲಿಗೆ ಮತ್ತು ಅವರ ಬದುಕಿಗೆ ಮುಳುವಾಗಿದೆ. ಸರ್ವೆ ನಂ ೩೮/೪೦ ರಲ್ಲಿ ಬರುವ ಜಮೀನಿನ ಬಡ ರೈತರ ಗೋಳನ್ನು ಕೇಳದವರಿಲ್ಲದಂತಾಗಿದೆ. ಹೊಲದ ಒಡ್ಡುಗಳೆಲ್ಲವನ್ನು ನಾಶಮಾಡಿ ಜಮೀನಿನ ತಳ ಭಾಗದಲ್ಲಿ ಇರುವಂತ ಮರಳನ್ನು ತುಂಬುತ್ತಿರುವುದರಿಂದ ಬೆಳೆ ಹಾನಿ, ಹಾಗೂ ಮಳೆಗಾಲದಲ್ಲಿ ವಡ್ಡುಗಳಿಲ್ಲದ ಹರಿಯುವ ನೀರಿನಿಂದಾಗಿ ಜಮೀನುಗಳಲ್ಲಿ ಕೊರಕಲುಗಳು ಉಂಟಾಗಿವೆ,

ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿರುವವರಲ್ಲಿ ಈ ಊರಿನ ಕೆಲವು ಪ್ರಮುಖ ವ್ಯಕ್ತಿಗಳು ಇರುವುದರಿಂದ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಹೆಮ್ಮರವಾಗಿ ಬೆಳೆದು ನಿಂತಿರುವ ಮರಳು ಸಾಗಾಣಿಕೆದಾರರ ಕೈಗಳ ಕೆಳಗೆ ಬಡ ರೈತರು ಏನನ್ನು ಮಾಡಲಾಗದಂತೆ ದುಸ್ಥಿತಿಗೆ ತಲುಪಿದ್ದಾರೆ. ಈ ಮೂಲಕ ಸರ್ವೇ ನಂ ೩೮/೪೦ ರಲ್ಲಿ ಬರುವ ಜಮೀನಿನ ಮಾಲಿಕರಾದ ಬಡರೈತರು ಕೇಳಿಕೊಳ್ಳುವುದೆನೆಂದರೆ ತಕ್ಷಣವೇ ಅಕ್ರಮ ಮರುಳು ಸಾಗಾಣಿಕೆ ಮಾಡುವವರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಂದು ಬಡ ರೈತರ ಕಷ್ಟವನ್ನು ನಿಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಮೂಲಕ ವಿನಂತಿಸಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಬಸವರಾಜ ಬಿ ಕಳ್ಳಿ, ನಿಂಗಪ್ಪ ಕಳ್ಳಿ, ಬರಮಪ್ಪ ಬಡಿಗೇರ, ಶಿವುಕುಮಾರ ಕಮ್ಮಾರ, ಶಂಕರ ಕಮ್ಮಾರ, ರಾಮಚಂದ್ರ ಕೆ, ಚಂದ್ರಶೇಖರ, ಆನಂದ ಬಿ, ಫಕೀರಪ್ಪ ಶಿರಿಗೇರಿ, ಈರಣ್ಣ ಹಾಗೂ ಇತರರು ಹಾಜರಿದ್ದರು. ಬಸವರಾಜ ಕಳ್ಳಿ- ೯೦೦೮೨೦೮೧೨೭, ಶಂಕರ ಕಮ್ಮಾರ 

Leave a Reply