ಯುವಕ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಜ.೧೩ (ಕ ವಾ) ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮಂಜುನಾಥ ತಂದೆ ಲಕ್ಷ್ಮಣ ಬೈಲಪತ್ತಾರ (೨೫) ಎಂಬ ಯುವಕ ಡಿ. ೧೧ ರಿಂದ ಕಾಣೆಯಾಗಿದ್ದು, ಯುವಕನ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯುವಕ ಮಂಜುನಾಥ ಕಳೆದ ೨೦೧೫ ರ ಡಿ.೧೧ ರಂದು ಅಮವ್ಯಾಸೆಯ ದಿನ ಕುಕನೂರಿನಲ್ಲಿರುವ ತನ್ನ ಅಣ್ಣನಿಗೆ ನನಗೆ ತುಂಬಾ ಬೇಸರವಾಗಿದೆ. ಗುದ್ನೇಶ್ವರ ಜಾತ್ರೆ ಇರುವುದರಿಂದ ಅಲ್ಲಿಗೆ ಬರುತ್ತೇನೆ
ಎಂದು ಹೇಳಿ ಮನೆಯಿಂದ  ಹೋದವನು. ಅಲ್ಲಿಗೂ ಹೋಗದೆ, ವಾಪಸ್ ಮನೆಗೂ ಬಂದಿಲ್ಲ.  ಅಂದಿನಿಂದ
ಇಂದಿನವರೆಗೆ ತಮ್ಮ ಸಂಬಂಧೀಕರು ಇರುವ ಕಡೆಗಳಲ್ಲಿ ವಿಚಾರಿಸಲಾಗಿ ಅವನು ಅಲ್ಲಿಗೂ ಬಾರದೇ
ಎಲ್ಲಿಯೋ ಕಾಣೆಯಾಗಿದ್ದಾನೆ ಎಂಬುದಾಗಿ ಯುವಕನ ತಂದೆ ಲಕ್ಷ್ಮಣ ಬೈಲಪತ್ತಾರ ಅವರು
ಕುಷ್ಟಗಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ. ಕಾಣೆಯಾದ ಯುವಕನ ಚಹರೆ
ವಿವರ ಇಂತಿದೆ. ಹೆಸರು: ಮಂಜುನಾಥ ತಂದೆ ಲಕ್ಷ್ಮಣ ಬೈಲಪತ್ತಾರ, ವಯಸ್ಸು: ೨೫,
ಸಾ||ಕುಷ್ಟಗಿ, ಎತ್ತರ: ೫ ಫೀಟು ೧೦ ಇಂಚು, ವಿದ್ಯಾರ್ಹತೆ: ಪದವಿ, ಕನ್ನಡ ಮತ್ತು
ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಸದೃಢ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ,
ಉದ್ದನೆಯ ಮೂಗು, ಮನೆಯಿಂದ ಹೊರಡುವಾಗ ಬಿಳಿ ಗೀರಿನ ಶರ್ಟ್, ಒಂದು ನೀಲಿ ಟೀ ಶರ್ಟ್
ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕೊರಳಲ್ಲಿ ಒಂದು ಬೆಳ್ಳಿಯ ಚೈನು
ಹಾಕಿರುತ್ತಾನೆ. ಈ ಚಹರೆಯುಳ್ಳ ವ್ಯಕ್ತಿಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ
ಕಂಡಲ್ಲಿ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳು ದೂರವಾಣಿ ಸಂಖ್ಯೆ: ೦೮೫೩೯-೨೩೦೧೧೧, ಕುಷ್ಟಗಿ ಪೊಲೀಸ್ ಠಾಣೆ,
ದೂರವಾಣಿ ಸಂಖ್ಯೆ: ೦೮೫೩೬-೨೬೭೦೩೩, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ:
೦೮೫೩೯-೨೩೦೨೨೨ ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್
ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ.

Please follow and like us:
error