ಅವೈಜ್ಞಾನಿಕವಾಗಿ ಟ್ರಾನ್ಸಫಾರಮರ್ ಜೋಡಣೆ

 ಕೊಪ್ಪಳ ನಗರದ ವಾಲ್ಮೀಕಿ ವೃತ್ತ ಎಲ್.ಐ.ಸಿ ಬಿಲ್ಡಿಂಗ ಮುಂದೆ ರಸ್ತೆ ಅಗಲಿಕರಣದಿಂದ ಟ್ರಾನ್ಸಫಾರಮರ್ ಸ್ಥಳಾಂತರಿಸಲಾಗಿದೆ. ಈ ಒಂದು  ಟ್ರಾನ್ಸಫಾರಮರ್ ನೆಲದಿಂದ ಕೇವಲ ೨-೩ ಫೀಟ ಅಂತರದಲ್ಲಿ ಅದನ್ನು ಜೋಡಿಸಲಾಗಿದೆ ಅಲ್ಲದೇ ಈ ಒಂದು ವೃತ್ತ ಜನ ಸಂಧಣಿಯ ಸ್ಥಳವಾಗಿದೆ ಮತ್ತು ಇಲ್ಲಿ ನಾಲ್ಕು ಶಾಲೆಗಳಿವೆ ಇಂತಹ ಸ್ಥಳದಲ್ಲಿ ಈ ಒಂದು ಮಟ್ಟಕ್ಕೆ ಅದನ್ನು ಜೋಡಿಸಿದ್ದು ಅವೈಜ್ಞಾನಿಕವಾಗಿದೆ. ಈ ಒಂದು ಸ್ಥಳದಲ್ಲಿ ಶಾಲಾ ಮಕ್ಕಳು ಓಡಾಡುವುದರಿಂದ ಸಂಬಂದಪಟ್ಟ ಅಧಿಕಾರಿಗಳು ಅಪಗಾತಕ್ಕೆ ತುತ್ತಾಗುವದಕ್ಕಿಂತ ಮುಂಚೆಯೇ ಇದರ ಬಗ್ಗೆ ಗಮನ ಹರಿಸಬೇಕು. ಇಂತಹ ಉದಾಹರಣೆಗಳು ಕೊಪ್ಪಳ ನಗರದಲ್ಲಿ ಹಲವು ಕಡೆಇವೆ. ಇದನ್ನು ಆದಷ್ಟು ಬೇಗನೇ ಸರಿಪಡಿಸದೇ ಹೊದಲ್ಲಿ ಹೋರಾಟ ಅನಿವಾರ್ಯವಾಗುವುದೆಂದು ರಾಕೇಶ ಕಾಂಬ್ಳೇಕರ ,ರಾಜಪ್ಪ ಚಿನಿ ನಾಯಕ್ ತಿಳಿಸಿದ್ದಾರೆ. 

Please follow and like us:
error